ಸಾಂದದರ್ಭಿಕ ಚಿತ್ರ
ದೇಶ
ಮಹಾರಾಷ್ಟ್ರದಲ್ಲಿ ಇಂದು ಕೊರೋನಾಗೆ 328 ಬಲಿ, 23,350 ಮದಿಗೆ ಪಾಸಿಟಿವ್
ಲಾಕ್‌ಡೌನ್ ನಿರ್ಬಂಧಗಳು ಸಡಿಲಗೊಂಡಂತೆ ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ 23 ಸಾವಿರಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಮುಂಬೈ: ಲಾಕ್‌ಡೌನ್ ನಿರ್ಬಂಧಗಳು ಸಡಿಲಗೊಂಡಂತೆ ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ 23 ಸಾವಿರಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಇಂದು, 23,350 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 9,07,212ಕ್ಕೆ ಏರಿಕೆಯಾಗಿದೆ. ಅಲ್ಲದೆ ಮಹಾಮಾರಿಗೆ 328 ಮಂದಿ ಬಲಿಯಾಗಿದ್ದಾರೆ.
ಧಾರಾವಿಯಲ್ಲಿ ಹೊಸದಾಗಿ ಆರು ಪ್ರಕರಣಗಳು ವರದಿಯಾಗಿದ್ದು, ಅತಿ ದೊಡ್ಡ ಸ್ಲಂನ ಸೋಂಕಿತರ ಸಂಖ್ಯೆ 2819ಕ್ಕೆ ಏರಿಕೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.
ಇಂದು 7826 ಮಂದಿಗೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ ಆಗಿದ್ದಾರ.
ಮುಂಬೈನಲ್ಲಿ 1910 ಹೊಸ ಪ್ರಕರಣಗಳು ಮತ್ತು 37 ಸಾವುಗಳು ವರದಿಯಾಗಿದ್ದು, ಇದರೊಂದಿಗೆ ವಾಣಿಜ್ಯ ನಗರಿಯ ಸೋಂಕಿತರ ಸಂಖ್ಯೆ 1,55,622 ಮತ್ತು ಸಾವಿನ ಸಂಖ್ಯೆ 7869ಕ್ಕೆ ತಲುಪಿದೆ.

