ಕೋವಿಡ್-19 ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಪ್ರಯೋಜನವಾಗುವುದಿಲ್ಲ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ

ಕೋವಿಡ್-19 ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯಿಂದ ಯಾವುದೇ ರೀತಿಯ ಪ್ರಯೋಜನವಾಗಲಿ, ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯವಾಗುವುದಿಲ್ಲ, ರೋಗ ನಿಯಂತ್ರಣಕ್ಕೆ ಸಹ ಸಹಾಯವಾಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹೇಳಿದೆ.
ಪ್ಲಾಸ್ಮಾ ಬ್ಯಾಂಕಿನಲ್ಲಿ ಪ್ಲಾಸ್ಮಾ ನೀಡುತ್ತಿರುವ ಕೋವಿಡ್-19ನಿಂದ ಗುಣಮುಖರಾದ ವ್ಯಕ್ತಿ
ಪ್ಲಾಸ್ಮಾ ಬ್ಯಾಂಕಿನಲ್ಲಿ ಪ್ಲಾಸ್ಮಾ ನೀಡುತ್ತಿರುವ ಕೋವಿಡ್-19ನಿಂದ ಗುಣಮುಖರಾದ ವ್ಯಕ್ತಿ
Updated on

ನವದೆಹಲಿ: ಕೋವಿಡ್-19 ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯಿಂದ ಯಾವುದೇ ರೀತಿಯ ಪ್ರಯೋಜನ, ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯವಾಗುವುದಿಲ್ಲ, ರೋಗ ನಿಯಂತ್ರಣಕ್ಕೆ ಸಹ ಸಹಾಯವಾಗುವುದಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಹೇಳಿದೆ.

ಪ್ಲಾಸ್ಮಾ ಥೆರಪಿಯ ಪ್ರಯೋಜನಗಳ ಬಗ್ಗೆ ಐಸಿಎಂಆರ್ ಪ್ರಯೋಗವನ್ನು ನಡೆಸಿದ್ದು, ಅದಕ್ಕೆ ಪ್ಲಾಸಿಡ್ ಎಂದು ಹೆಸರು. ಭಾರತೀಯ ವೈದ್ಯಕೀಯ ಮಂಡಳಿ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 39 ಆಸ್ಪತ್ರೆಗಳಲ್ಲಿ ನಡೆಸಿದೆ.

ಕೊರೋನಾದಿಂದ ಸಾಧಾರಣವಾಗಿ ಮಧ್ಯಮ ಪ್ರಮಾಣದ ಸೋಂಕಿನಿಂದ ಬಳಲುತ್ತಿರುವ 464 ರೋಗಿಗಳ ಮೇಲೆ ಅಧ್ಯಯನ ನಡೆಸಲಾಗಿದ್ದು ಅವರಲ್ಲಿ 235 ಮಂದಿಗೆ ಚೇತರಿಸಿಕೊಳ್ಳುವ ಪ್ಲಾಸ್ಮಾ(ಸಿಪಿ0 convalescent plasma)ವನ್ನು ಗುಣಮುಖರಾಗಿರುವ ಕೊರೋನಾ ರೋಗಿಗಳಿಂದ ನೀಡಲಾಗಿದೆ.

ಉಳಿದ 229 ಮಂದಿಗೆ ಸಾಧಾರಣ ಆರೈಕೆ ನೀಡಲಾಗಿದೆ. ಮಧ್ಯದ ಗುಂಪಿನ ರೋಗಿಗಳಿಗೆ 24 ಗಂಟೆಗಳಲ್ಲಿ 200 ಎಂಎಲ್ ಪ್ಲಾಸ್ಮಾ ನೀಡಲಾಗಿದೆ. ಅಧ್ಯಯನದಲ್ಲಿ 34 ರೋಗಿಗಳು ಅಥವಾ ಶೇಕಡಾ 13.6 ಮಂದಿ ರೋಗಿಗಳು ಪ್ಲಾಸ್ಮಾ ಥೆರಪಿ ಪಡೆದುಕೊಂಡವರು ಮೃತಪಟ್ಟಿದ್ದಾರೆ. 31 ರೋಗಿಗಳು ಅಥವಾ ಶೇಕಡಾ 14.6ರಷ್ಟು ಮಂದಿ ಪ್ಲಾಸ್ಮಾ ಥೆರಪಿಗೆ ಒಳಗಾಗದವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್-19 ಹೆಚ್ಚುತ್ತಿರುವ ಸಂದರ್ಭದಲ್ಲಿ, ಹಲವು ರಾಜ್ಯ ಸರ್ಕಾರಗಳು ಪ್ಲಾಸ್ಮಾ ಥೆರಪಿ ಬ್ಯಾಂಕ್ ಗಳನ್ನು ಸ್ಥಾಪಿಸುತ್ತಿರುವಾಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಈ ವರದಿ ಆತಂಕ ಹುಟ್ಟಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com