ಕೋವಾಕ್ಸಿ'ನ್ , ಪ್ರಾಣಿಗಳ ಮೇಲಿನ ಪ್ರಯೋಗದಲ್ಲಿ ರೋಗ ನಿರೋಧಕ ಶಕ್ತಿ ಪ್ರಬಲ- ಭಾರತ್ ಬಯೋಟೆಕ್ 

ಪ್ರಾಣಿಗಳ ಮೇಲಿನ ಕೋವಾಕ್ಸಿನ್ ಪ್ರಯೋಗ ಅಧ್ಯಯನದಲ್ಲಿ ಸಕಾರಾತ್ಮಕ ದಕ್ಷತೆ ಕಂಡುಬಂದಿದ್ದು, ರೋಗ ನಿರೋಧಕ ಶಕ್ತಿ ಪ್ರಬಲವಾಗಿರುವುದು ಕಂಡುಬಂದಿದೆ ಎಂದು ಭಾರತ್ ಬಯೋಟೆಕ್ ಔಷಧೀಯ ಕಂಪನಿ ಹೇಳಿದೆ.
ಕೋವಾಕ್ಸಿನ್
ಕೋವಾಕ್ಸಿನ್

ನವದೆಹಲಿ: ಪ್ರಾಣಿಗಳ ಮೇಲಿನ ಕೋವಾಕ್ಸಿನ್ ಪ್ರಯೋಗ ಅಧ್ಯಯನದಲ್ಲಿ ಸಕಾರಾತ್ಮಕ ದಕ್ಷತೆ ಕಂಡುಬಂದಿದ್ದು, ರೋಗ ನಿರೋಧಕ ಶಕ್ತಿ ಪ್ರಬಲವಾಗಿರುವುದು ಕಂಡುಬಂದಿದೆ ಎಂದು ಭಾರತ್ ಬಯೋಟೆಕ್ ಔಷಧೀಯ ಕಂಪನಿ ಹೇಳಿದೆ.

ಕೋವಾಕ್ಸಿನ್ ಕೋವಿಡ್-19 ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ಮತ್ತು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ್ದು, ದೇಶಾದ್ಯಂತ ಸುಮಾರು 12 ಸಂಸ್ಥೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ.ಸ್ವದೇಶಿ ನಿರ್ಮಿತ ಈ ಲಸಿಕೆ ದೇಶದಲ್ಲಿನ ಕೊರೋನಾವೈರಸ್ ಲಸಿಕೆಗಳ ಪೈಕಿಯಲ್ಲಿ ಮುಂಚೂಣಿಯಲ್ಲಿದೆ.

ಕೋವಾಕ್ಸಿನ್  ಮೇಲಿನ ಪ್ರಾಣಿ ಪ್ರಯೋಗ ಅಧ್ಯಯನದಲ್ಲಿ ಪರಿಣಾಮಕಾರಿ ದಕ್ಷತೆ ಕಂಡುಬಂದಿದೆ ಎಂದು ಹೈದ್ರಾಬಾದ್ ಮೂಲದ ಸಂಸ್ಥೆ ತಿಳಿಸಿದೆ.

ಕೋವಾಕ್ಸಿನ್  ಔಷಧದಿಂದ ಪ್ರಬಲ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತಿದೆ.ಇದು  ಸಾರ್ಸ್-ಕೋವ್-2 ವೈರಸ್ ನಿಂದ ಹರಡುವ ಸೋಂಕು ಹಾಗೂ ಕಾಯಿಲೆಯನ್ನು ತಡೆಗಟ್ಟುತ್ತದೆ ಎಂದು ಭಾರತ್ ಬಯೋಟೆಕ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com