ದೆಹಲಿ ಮೆಟ್ರೊ ಪೂರ್ಣ ಪ್ರಮಾಣದಲ್ಲಿ ಸಂಚಾರ ಇಂದು ಆರಂಭ:ಕೋವಿಡ್-19 ಮಾರ್ಗಸೂಚಿ ಅನುಸರಿಸಲು ಸೂಚನೆ

ಏರ್ ಪೋರ್ಟ್ ಎಕ್ಸ್ ಪ್ರೆಸ್ ಮಾರ್ಗ ಮರು ಆರಂಭಗೊಳ್ಳುವುದರೊಂದಿಗೆ ದೆಹಲಿ ಮೆಟ್ರೊ 5 ತಿಂಗಳ ಕೋವಿಡ್-19 ಲಾಕ್ ಡೌನ್ ನಂತರ ತನ್ನ ಸೇವೆಯನ್ನು ಶನಿವಾರ ಸಂಪೂರ್ಣವಾಗಿ ಆರಂಭಿಸಿದೆ.
ದೆಹಲಿ ಮೆಟ್ರೊದಲ್ಲಿ ಪ್ರಯಾಣಿಕರ ಸಂಚಾರ
ದೆಹಲಿ ಮೆಟ್ರೊದಲ್ಲಿ ಪ್ರಯಾಣಿಕರ ಸಂಚಾರ

ನವದೆಹಲಿ:ಏರ್ ಪೋರ್ಟ್ ಎಕ್ಸ್ ಪ್ರೆಸ್ ಮಾರ್ಗ ಮರು ಆರಂಭಗೊಳ್ಳುವುದರೊಂದಿಗೆ ದೆಹಲಿ ಮೆಟ್ರೊ 5 ತಿಂಗಳ ಕೋವಿಡ್-19 ಲಾಕ್ ಡೌನ್ ನಂತರ ತನ್ನ ಸೇವೆಯನ್ನು ಶನಿವಾರ ಸಂಪೂರ್ಣವಾಗಿ ಆರಂಭಿಸಿದೆ.

ಮೆಟ್ರೊ ಸಂಚಾರ ಸಂಪರ್ಕಜಾಲದ ಎಲ್ಲಾ ಕಾರಿಡಾರ್ ಗಳು ಇದೀಗ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಆರಂಭಿಸಿದ್ದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಸಂಚರಿಸಲಿವೆ.

ಏರ್ ಪೋರ್ಟ್ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಇಂದು ಸಂಚಾರ ಆರಂಭಿಸುವ ಮೂಲಕ ದೆಹಲಿ ಮೆಟ್ರೊದ ಎಲ್ಲಾ ಮಾರ್ಗಗಳಲ್ಲಿ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಮೆಟ್ರೊ ಸಂಚಾರ ಆರಂಭವಾಗುತ್ತಿದ್ದು ಪ್ರಯಾಣಿಕರು ಸಂಚಾರ ಮಾಡುವಾಗ ತಪ್ಪದೆ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಲು ಮರೆಯಬೇಡಿ ಎಂದು ದೆಹಲಿ ಮೆಟ್ರೊ ರೈಲು ನಿಗಮ ಟ್ವೀಟ್ ಮಾಡಿದೆ.

ಹಳದಿ ಮಾರ್ಗ ಮತ್ತು ರ್ಯಾಪಿಡ್ ಮೆಟ್ರೊ ಹೊರತುಪಡಿಸಿ ಬೇರೆ ಮಾರ್ಗಗಳಲ್ಲಿ ಕಳೆದ ಸೋಮವಾರ ಸಂಚಾರ ಆರಂಭವಾಗಿತ್ತು. ಕಳೆದ ಮಾರ್ಚ್ 22ರಂದು ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ಮೆಟ್ರೊ ಸಂಚಾರ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com