ಚೆನ್ನೈ-ಮೈಸೂರು ಸೇರಿದಂತೆ 10 ಟ್ರಿಲಿಯನ್ ವೆಚ್ಚದಲ್ಲಿ ಏಳು ನೂತನ ಬುಲೆಟ್ ರೈಲು ಯೋಜನೆಗೆ ಕೇಂದ್ರ ಸರ್ಕಾರ ಚಿಂತನೆ

 ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂಬೈ- ಅಹಮದಾಬಾದ್ ನಡುವಣ ಯೋಜನೆ ವಿಳಂಬವಾಗಿದ್ದರೂ ಏಳು ನೂತನ ಬುಲೆಟ್ ರೈಲು ಯೋಜನೆಗಾಗಿ 10 ಟ್ರಿಲಿಯನ್ ವೆಚ್ಚ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಂಬೈ- ಅಹಮದಾಬಾದ್ ನಡುವಣ ಯೋಜನೆ ವಿಳಂಬವಾಗಿದ್ದರೂ ಏಳು ನೂತನ ಬುಲೆಟ್ ರೈಲು ಯೋಜನೆಗಾಗಿ 10 ಟ್ರಿಲಿಯನ್ ವೆಚ್ಚ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಚೆನ್ನೈ- ಮೈಸೂರು, ದೆಹಲಿ- ವಾರಾಣಸಿ, ಮುಂಬೈ- ನಾಗಪುರ, ದೆಹಲಿ- ಅಹಮದಾಬಾದ್, ದೆಹಲಿ- ಅಮೃತಸರ, ಮುಂಬೈ-ಹೈದ್ರಾಬಾದ್, ವಾರಾಣಸಿ- ಹೌರಾ ನಡುವಣ ಈ ನೂತನ ಯೋಜನೆಗಳು ಸಂಪರ್ಕಿಸಲಿವೆ. ಇಡೀ ಯೋಜನೆ ಒಟ್ಟಾರೇ 4869 ಕಿಲೋ ಮೀಟರ್ ದೂರವನ್ನು ಹೊಂದಿವೆ.

ಪ್ರತಿ ಕಿಲೋ ಮೀಟರ್ ಗೆ 213 ಕೋಟಿಯಂತೆ ನೂತನ ಯೋಜನೆಗೆ  ಒಟ್ಟಾರೇ 10 ಟ್ರಿಲಿಯನ್ ನಷ್ಟು ವೆಚ್ಚವಾಗಲಿದೆ ಎಂದು  ಮೂಲಗಳಿಂದ ತಿಳಿದುಬಂದಿದೆ.

ನೂತನ ಏಳು ಕಾರಿಡಾರ್ ಗಳಿಗೆ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ಸರ್ಕಾರ ಕೇಳಿದೆ. ಡಿಪಿಆರ್ ಸಿದ್ಧಗೊಂಡ ಬಳಿಕವಷ್ಟೇ ವೆಚ್ಚ ಮಾಡಬೇಕಾದ ಹಣದ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಷ್ಟ್ರೀಯ ಹೈ ಸ್ಪೀಡ್  ರೈಲು ಕಾರ್ಪೋರೇಷನ್ (ಎನ್ ಹೆಚ್ ಎಸ್ ಆರ್ ಸಿಎಲ್ ) ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com