ಆಪತ್ಕಾಲದಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರ: ಪಿಎಂ ಕೇರ್ಸ್ ಕುರಿತು ರಾಹುಲ್ ಗಾಂಧಿ ಗಂಭೀರ ಆರೋಪ

 ಕೋವಿಡ್ -19 ಬಿಕ್ಕಟ್ಟಿನ ಹಂತದಲ್ಲಿ ನೀಡಿದ ಭರವಸೆಗಳು ಹುಸಿಯಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನ ಹಂತದಲ್ಲಿ ನೀಡಿದ ಭರವಸೆಗಳು ಹುಸಿಯಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

"21 ದಿನಗಳಲ್ಲಿ ಕೊರೋನಾವನ್ನು ನಿರ್ನಾಮ ಮಾಡುವ ಬಗ್ಗೆ ಗಾಳಿಯಲ್ಲಿ ಕೋಟೆಗಳನ್ನು ಕಟ್ಟುವುದು, ಜನರ ರಕ್ಷಣೆಗಾಗಿ ಆರೋಗ್ಯ ಸೆತು ಅಪ್ಲಿಕೇಶನ್, 20 ಲಕ್ಷ ಕೋಟಿ ಪ್ಯಾಕೇಜ್, ಯಾರೂ ನಮ್ಮ ಗಡಿಗಳನ್ನು ಅತಿಕ್ರಮಿಸಿಲ್ಲ, ಪರಿಸ್ಥಿತಿ ನಿಯಂತ್ರಣದಲ್ಲಿದೆ...."  ವಯನಾಡ್ ಸಂಸದರು ಕೇಂದ್ರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕ ತನ್ನ ಟ್ವೀಟ್ ಮೂಲಕ, ಕೇಂದ್ರ ಸರ್ಕಾರ ಸುಳ್ಳುಗಳ ಸರಮಾಲೆ ಹೆಣೆದಿದೆ ಎಂದಿದ್ದಾರೆ ಹಾಗೆಯೇ "ಒಂದು ಸತ್ಯವೂ ಇದೆ: 'ಆಪ್ಡಾ ಮಿ ಅವ್ಸರ್' (ವಿಪತ್ತಿನಲ್ಲಿ ಅವಕಾಶ) ಪಿಎಂ ಕೇರ್ಸ್." ಎಂದೂ ಕುಟುಕಿದ್ದಾರೆ.

ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಪ್ರಧಾನಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (PM CARES) ನಿಧಿಯನ್ನು ಮಾರ್ಚ್ 2020 ರಲ್ಲಿ ರಚಿಸಲಾಯಿತು. ಈ ನಿಧಿಯು ಕೋವಿಡ್ -19 ವಿರುದ್ಧದ ಹೋರಾಟವನ್ನು ಬಲಪಡಿಸುವ, ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವ ಮತ್ತು ರೋಗದ ಪರಿಸ್ಥಿತಿಯ ವಿರುದ್ಧ ಹೋರಾಡಲು ಸಂಶೋಧನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. 

 ಪಿಎಂ ಕೇರ್ಸ್ ಫಂಡ್ ಸ್ಥಾಪನೆಗೆ ಕಾಂಗ್ರೆಸ್ ವಿರುದ್ಧವಾಗಿದೆ ಮತ್ತು ಈ ಹಿಂದೆ ನಿಧಿಗೆ ದೇಣಿಗೆ ಕೊಟ್ಟ ದಾನಿಗಳ ಹೆಸರನ್ನು ಬಹಿರಂಗಪಡಿಸದ ಕಾರಣ ಕೇಂದ್ರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com