ಪುಲ್ವಾಮ ಮಾದರಿಯ ಉಗ್ರ ಕೃತ್ಯ ವಿಫಲಗೊಳಿಸಿದ ಸೇನೆ, 52 ಕೆ.ಜಿ ಸ್ಫೋಟಕ ವಶ 

ಪುಲ್ವಾಮ ಮಾದರಿಯ ಭಯಾನಕ ಉಗ್ರ ಕೃತ್ಯವೊಂದನ್ನು ಭಾರತೀಯ ಸೇನೆ ಯಶಸ್ವಿಯಾಗಿ ವಿಫಲಗೊಳಿಸಿದ್ದು 52 ಕೆ.ಜಿ ಸ್ಫೋಟಕಗಳನ್ನು ವಶಕ್ಕೆ ಪಡೆದಿದೆ. 
ಪುಲ್ವಾಮ ದಾಳಿ  (ಸಂಗ್ರಹ ಚಿತ್ರ)
ಪುಲ್ವಾಮ ದಾಳಿ (ಸಂಗ್ರಹ ಚಿತ್ರ)

ಶ್ರೀನಗರ: ಪುಲ್ವಾಮ ಮಾದರಿಯ ಭಯಾನಕ ಉಗ್ರ ಕೃತ್ಯವೊಂದನ್ನು ಭಾರತೀಯ ಸೇನೆ ಯಶಸ್ವಿಯಾಗಿ ವಿಫಲಗೊಳಿಸಿದ್ದು 52 ಕೆ.ಜಿ ಸ್ಫೋಟಕಗಳನ್ನು ವಶಕ್ಕೆ ಪಡೆದಿದೆ. 

ಕಳೆದ ವರ್ಷ ಪುಲ್ವಾಮದಲ್ಲಿ ಯೋಧರ ಮೇಲೆ ನಡೆದ ಭೀಕರ ದಾಳಿಯ ಪ್ರದೇಶದ ಸನಿಹದಲ್ಲೆ ಈ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. 

40 ಸಿಆರ್ ಪಿಎಫ್ ಸಿಬ್ಬಂದಿಗಳ ಮೇಲೆ ದಾಳಿ ನಡೆದ ಪ್ರದೇಶದಿಂದ ಕೇವಲ 9 ಕಿ.ಮೀ ದೂರದಲ್ಲಿ ಈ ಘಟನೆ ವರದಿಯಾಗಿದ್ದು, ಗಡಿಕಲ್ ನ ಕರೇವಾ ಬಳಿ ಸಿಂಟೆಕ್ಸ್ ನೀರಿನ ಟ್ಯಾಂಕ್ ನಲ್ಲಿ ಸ್ಫೋಟಗಳನ್ನು ಅಡಗಿಸಲಾಗಿತ್ತು ಎಂದು ಸೇನಾ ಪಡೆ ತಿಳಿಸಿದೆ. 

416 ಪ್ಯಾಕ್ ಗಳಷ್ಟು ಸ್ಫೋಟಕಗಳಿದ್ದವು, ಪ್ರತಿಯೊಂದರಲ್ಲಿಯೂ 125 ಗ್ರಾಮ್ ನಷ್ಟು ಸ್ಫೋಟಕಗಳನ್ನು ತುಂಬಿಸಲಾಗಿತ್ತು, 50 ಡಿಟೋನೇಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ, ವಶಕ್ಕೆ ಪಡೆಯಲಾಗಿರುವ ಸ್ಫೋಟಕಗಳನ್ನು ಸೂಪರ್-90 ಅಥವಾ ಎಸ್-90 ಎನ್ನುತ್ತಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com