ಬೆಂಗಳೂರು ಮೂಲದ ಐಟಿ ಕಂಪನಿ ಮೇಲ್ ನಿಂದ ಎನ್ಐಸಿ ಕಂಪ್ಯೂಟರ್‌ಗಳ ಮೇಲೆ ಸೈಬರ್ ದಾಳಿ!

ಭಾರಿ ಭದ್ರತಾ ವೈಫಲ್ಯದಲ್ಲಿ , ದೇಶದಲ್ಲಿ ನಿರ್ಣಾಯಕ ಸೈಬರ್-ಮೂಲಸೌಕರ್ಯ ಭದ್ರತಾ  ಜವಾಬ್ದಾರಿಯನ್ನು ಹೊಂದಿರುವ ಸರ್ಕಾರದ ನೋಡಲ್ ಏಜೆನ್ಸಿಯಾದ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ಯ ಸುಮಾರು 100 ಕಂಪ್ಯೂಟರ್‌ಗಳ ಮೇಲೆ ಮಾಲ್‌ವೇರ್ ಸೈಬರ್  ದಾಳಿ ನಡೆದಿದೆ.
ಬೆಂಗಳೂರು ಮೂಲದ ಐಟಿ ಕಂಪನಿ ಮೇಲ್ ನಿಂದ ಎನ್ಐಸಿ ಕಂಪ್ಯೂಟರ್‌ಗಳ ಮೇಲೆ ಸೈಬರ್ ದಾಳಿ!

ನವದೆಹಲಿ: ಭಾರಿ ಭದ್ರತಾ ವೈಫಲ್ಯದಲ್ಲಿ, ದೇಶದಲ್ಲಿ ನಿರ್ಣಾಯಕ ಸೈಬರ್-ಮೂಲಸೌಕರ್ಯ ಭದ್ರತಾ  ಜವಾಬ್ದಾರಿಯನ್ನು ಹೊಂದಿರುವ ಸರ್ಕಾರದ ನೋಡಲ್ ಏಜೆನ್ಸಿಯಾದ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ಯ ಸುಮಾರು 100 ಕಂಪ್ಯೂಟರ್‌ಗಳ ಮೇಲೆ ಮಾಲ್‌ವೇರ್ ಸೈಬರ್  ದಾಳಿ ನಡೆದಿದೆ.

ದೆಹಲಿ ಪೊಲೀಸರ ವಿಶೇಷ ಸೆಲ್ ಈ ಬಗ್ಗೆ ತನಿಖೆ ಆರಂಭಿಸಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

ಪ್ರಾಥಮಿಕ ತನಿಖೆಯಿಂದ ಬೆಂಗಳೂರಿನ ಸಂಸ್ಥೆಯೊಂದರ ಇಮೇಲ್ ಮಾಲ್‌ವೇರ್ ಅನ್ನು ರಚಿಸಿದೆ ಎಂದು ಶಂಕಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಮೀಟಿವೈ) ಉದ್ಯೋಗಿಯೊಬ್ಬರು ತಮ್ಮ ದೂರಿನಲ್ಲಿ ತಮ್ಮ ಇಮೇಲ್ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಮತ್ತು ಸೈಬರ್ ದಾಳಿ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ. 

ಅವರ ಕಂಪ್ಯೂಟರ್ ಮಾತ್ರವಲ್ಲ, ಇನ್ನೂ ಹಲವಾರು ಜನರ ಕಂಪ್ಯೂಟರ್ ಗಳು ಇದೇ ಬಗೆಯ ದಾಳಿಗೆ ಒಳಗಾಗಿದೆ. ಪ್ರಾಥಮಿಕ ತನಿಖೆಯ ಸಮಯದಲ್ಲಿ, ಈ ಹಲವಾರು ಸಿಸ್ಟಮ್ ಗಳು ಮಾಲ್‌ವೇರ್ ದಾಳಿ ಎಂದು ಶಂಕಿಸಲಾಗಿರುವ ಇಮೇಲ್ ಅನ್ನು ಸ್ವೀಕರಿಸಿರುವುದು ಕಂಡುಬಂದಿದೆ. ಬಳಕೆದಾರರು ಇಮೇಲ್ ಅನ್ನು ಕ್ಲಿಕ್ ಮಾಡಿದಾಗ, ಅವರ ಸಿಸ್ಟಮ್ ಗಳ ಮೇಲೆ ಇದು ಒಅರಿಣಾಮ ಬೀರುತ್ತದೆ. ಈ ಸಮಸ್ಯೆಯ ಮೂಲವನ್ನು  ಬೆಂಗಳೂರಿನ ಐಟಿ ಕಂಪನಿಯೊಂದರ ಜತೆ ಸಂಪರ್ಕಿಸಲಾಗಿದೆ. 

ಮೂಲಗಳ ಪ್ರಕಾರ, ಎನ್‌ಐಸಿಯ ಸೈಬರ್ ಹಬ್‌ನಲ್ಲಿರುವ ಕಂಪ್ಯೂಟರ್‌ಗಳು ಭಾರತದ ಭದ್ರತೆ, ನಾಗರಿಕರು ಮತ್ತು ಸರ್ಕಾರದ ಪ್ರಮುಖ ಕಾರ್ಯಕಾರಿಣಿಗಳು, ಪ್ರಧಾನಿ, ರಾಷ್ಟ್ರೀಯ ಭದ್ರತಾ ಸಲಹೆಗಾರ, ಗೃಹ ಸಚಿವರು ಸೇರಿದಂತೆ ಪ್ರಮುಖ ಮಾಹಿತಿ ಮತ್ತು ದತ್ತಾಂಶಗಳನ್ನು ಒಳಗೊಂಡಿವೆ. ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಇ-ಆಡಳಿತ ಯೋಜನೆಗಳ ಅನುಷ್ಠಾನಕ್ಕೆ ಎನ್‌ಐಸಿ ಸಹಾಯ ಮಾಡುತ್ತದೆ, ಸರ್ಕಾರಿ ಇಲಾಖೆಗಳಿಗೆ ಸಲಹೆಯನ್ನು ನೀಡುತ್ತದೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com