ನೂತನ ಕೃಷಿ ಮಸೂದೆಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಪಂಜಾಬ್ ಸರ್ಕಾರ ನಿರ್ಧಾರ

ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ನೂತನ ಕೃಷಿ ಸಂಬಂಧಿತ ಮಸೂದೆಗಳ ವಿರುದ್ಧ  ಪಂಜಾಬ್ ಸರ್ಕಾರ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್
Updated on

ಚಂಢೀಗಢ:  ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ನೂತನ ಕೃಷಿ ಸಂಬಂಧಿತ ಮಸೂದೆಗಳ ವಿರುದ್ಧ  ಪಂಜಾಬ್ ಸರ್ಕಾರ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.

ಕೇಂದ್ರ ಸರ್ಕಾರದ ನೂತನ ರೈತ ವಿರೋಧಿ,ಅಸಂವಿಧಾನಿಕ ಕಾಯ್ದೆಗೆ ಸಂಬಂಧಿಸಿದಂತೆ ಬಿಜೆಪಿ, ಶಿರೋಮಣಿ ಅಕಾಲಿ ದಳ ಸೇರಿದಂತೆ ಅದರ ಮೈತ್ರಿ ಪಕ್ಷಗಳನ್ನು ಕೋರ್ಟಿಗೆ ಎಳೆಯುವುದಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಭಾನುವಾರ ಹೇಳಿದ್ದಾರೆ.

ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ನೆಲದ ಕಾನೂನಾಗಿ ಜಾರಿಗೆ ಬಂದ ಕೂಡಲೇ ಕೋರ್ಟ್ ಮೆಟ್ಟಿಲೇರಿ ಕಠಿಣ ಶಾಸನಗಳ ವಿರುದ್ಧ ಹೋರಾಡುವುದಾಗಿ ಅವರು ತಿಳಿಸಿದ್ದಾರೆ.

ಪ್ರತಿಪಕ್ಷಗಳ ವಿರೋಧ ಮತ್ತು ಸದನದಲ್ಲಿ ಅಸಮರ್ಪಕ ಸಂಖ್ಯೆಯ ಹೊರತಾಗಿಯೂ, ಕೃಷಿ ಕ್ಷೇತ್ರದ ನಿಯಂತ್ರಣವನ್ನು ನಿರ್ಭಯವಾಗಿ ಆಕ್ರಮಿಸಿಕೊಂಡಿರುವ ವಿವಾದಾತ್ಮಕ ಮತ್ತು ಕೆಟ್ಟ ಮಸೂದೆಗಳನ್ನು ಅಂಗೀಕರಿಸುವ  ಹಿಂದಿನ ತಾರ್ಕಿಕತೆಯನ್ನು ಅಮರಿಂದರ್ ಪ್ರಶ್ನಿಸಿದ್ದಾರೆ.

ಆಡಳಿತಾತ್ಮಕ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟವನ್ನು (ಎನ್‌ಡಿಎ) ವಿಭಜಿಸಿರುವ ಈ ನಿರ್ಣಾಯಕ ವಿಷಯದ ಮೇಲೆ ಸದನ ಮತಗಳ ವಿಭಜನೆಗೆ ಏಕೆ ಹೋಗಲಿಲ್ಲ ಎಂದು ಅವರು ಕೇಳಿದ್ದು, ರೈತರೊಂದಿಗೆ ನಾವಿದ್ದು, ಅವರ ಹಿತಸಕ್ತಿ ಕಾಪಾಡಲು ಏನೆಲ್ಲಾ ಮಾಡಬೇಕೋ ಅದೆಲ್ಲಾವನ್ನು ಮಾಡುತ್ತೇವೆ. ಈ ಕಾಯ್ದೆಯಿಂದ ರೈತರ ಮೇಲೆ ಆಗುವ ಪರಿಣಾಮದ ಬಗ್ಗೆ ಬಿಜೆಪಿ ಮತ್ತು ಅದರ ಅಂಗಪಕ್ಷಗಳಿಗೆ ಸ್ಪಷ್ಟ ಕಾಳಜಿ ಇಲ್ಲ ಎಂದು ಅಮರೀಂದರ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com