ವಿಶ್ವವಿದ್ಯಾಲಯ ಪಠ್ಯವಾದ ಸುಶಾಂತ್ ಸಿಂಗ್, ಶ್ರೀದೇವಿ ಸಾವಿನ ಪ್ರಕರಣ

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ವಿಧಿವಿಜ್ಞಾನ ವಿಷಯದ ಅಧ್ಯಯನ ನಡೆಸುವವರಿಗೆ ಪೂರ್ವ ಭಾರತದಲ್ಲಿರುವ ಏಕೈಕ ಸರ್ಕಾರಿ ಸಂಸ್ಥೆಯಾದ ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಮಕಾಟ್)ಯಲ್ಲಿ ನಟರಾದ ಸುಶಾಂತ್ ಸಿಂಗ್ ರಜಪೂತ್ ಮತ್ತು ಶ್ರೀದೇವಿ ಅವರ ಸಾವಿನ ಪ್ರಕರಣಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ. ಇವರುಗಳ ಸಾವಿನ ಪ್ರಕರಣವನ್ನು ಪಠ್
ಸುಶಾಂತ್ ಸಿಂಗ್ ರಜಪೂತ್ ಶ್ರೀದೇ
ಸುಶಾಂತ್ ಸಿಂಗ್ ರಜಪೂತ್ ಶ್ರೀದೇ
Updated on

ಕೋಲ್ಕತಾ: ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ವಿಧಿವಿಜ್ಞಾನ ವಿಷಯದ ಅಧ್ಯಯನ ನಡೆಸುವವರಿಗೆ ಪೂರ್ವ ಭಾರತದಲ್ಲಿರುವ ಏಕೈಕ ಸರ್ಕಾರಿ ಸಂಸ್ಥೆಯಾದ ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಮಕಾಟ್)ಯಲ್ಲಿ ನಟರಾದ ಸುಶಾಂತ್ ಸಿಂಗ್ ರಜಪೂತ್ ಮತ್ತು ಶ್ರೀದೇವಿ ಅವರ ಸಾವಿನ ಪ್ರಕರಣಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ. ಇವರುಗಳ ಸಾವಿನ ಪ್ರಕರಣವನ್ನು ಪಠ್ಯಕ್ರಮದಲ್ಲಿ ಕೇಸ್ ಸ್ಟಡಿಯನ್ನಾಗಿ ಮಾಡಿಕೊಳ್ಳಲಾಗಿದೆ.

ಘಟನಾವಳಿಯನ್ನು ಪುನರ್ ಸೃಷ್ಟಿಸಲು  ಮತ್ತು ತಾರ್ಕಿಕ ವಿವರಣೆಗಳೊಂದಿಗೆ ತೀರ್ಮಾನಕ್ಕೆ ಬರಲು ವಿದ್ಯಾರ್ಥಿಗಳನ್ನು ಕೇಳಲಾಗುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಅಪರಾಧ ಮಾದರಿಗಳು ಮತ್ತು ಪ್ರತಿಕ್ರಿಯೆ ಶೈಲಿ ಬದಲಾಗಿದೆ ಎಂದು ವಿಶ್ವವಿದ್ಯಾನಿಲಯದ  ವಿಧಿವಿಜ್ಞಾನ ವಿಭಾಗದ  ಪ್ರಾಧ್ಯಾಪಕ ಸುಜಯ್ ಮಿತ್ರ ಹೇಳಿದರು.

“ಈಗ ಅನೇಕ ಸಂದರ್ಭಗಳಲ್ಲಿ ದಾಳಿಕೋರರು ಸೈಬರ್ ವರ್ಲ್ಶ್ ನ ಲಾಭ ಪಡೆಯುತ್ತಾರೆ. ಈಗ, ಒಬ್ಬ ವ್ಯಕ್ತಿಯು ಪ್ರತಿಕ್ರಿಯಿಸುವ ಕಾರಣಗಳು ಈ ಹಿಂದಿಗಿಂತ ಸಂಪೂರ್ಣ ಬದಲಾಗಿದೆ. 20 ವರ್ಷಗಳ ಹಿಂದೆ, ನಾವು ಅನೇಕ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದೆವು. ಆದರೆ ಪ್ರಸ್ತುತ ದಿನಗಳಲ್ಲಿ, ಖಿನ್ನತೆಗೆ ಅದೇ ಕಾರಣಗಳು ಮುಖ್ಯವಾಗುತ್ತಿವೆ, ”ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com