ಕಾರಿನೊಂದಿಗೆ ವಿದ್ಯಾರ್ಥಿಗಳು
ದೇಶ
ಇದೇ ಮೊದಲು, ಜಾರ್ಖಂಡ್ ಸರ್ಕಾರದಿಂದ 10, 12ನೇ ತರಗತಿಯ ರಾಜ್ಯ ಟಾಪರ್‌ಗಳಿಗೆ ಕಾರು ಗಿಫ್ಟ್!
ಜಾರ್ಖಂಡ್ ಸರ್ಕಾರ ಇದೇ ಮೊದಲ ಬಾರಿಗೆ 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬುಧವಾರ ಆಲ್ಟೊ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.
ರಾಂಚಿ: ಜಾರ್ಖಂಡ್ ಸರ್ಕಾರ ಇದೇ ಮೊದಲ ಬಾರಿಗೆ 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬುಧವಾರ ಆಲ್ಟೊ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.
ಇಂದು ರಾಜ್ಯ ಶಿಕ್ಷಣ ಸಚಿವ ಜಗರ್ನಾಥ್ ಮಹ್ಟೋ ಅವರು ಟಾಪರ್‌ಗಳಿಗೆ ಮಾರುತಿ ಆಲ್ಟೊ ಕಾರುಗಳನ್ನು ಹಸ್ತಾಂತರಿಸಿದರು.
ಫಲಿತಾಂಶ ಪ್ರಕಟವಾದ ದಿನದಂದು, ಮಹ್ಟೋ ಅವರು 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಕಾರು ಗಿಫ್ಟ್ ನೀಡಿದ್ದಾರೆ.
ಸ್ವತಃ 11ನೇ ತರಗತಿಯ ವಿದ್ಯಾರ್ಥಿಯಾಗಿರುವ ಸಚಿವರು, ಮುಂದಿನ ವರ್ಷದಿಂದ 11ನೇ ತರಗತಿಯ ಟಾಪರ್ ಗಳಿಗೂ ಕಾರು ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಅವರು ಯಾವುದೇ ಅಡೆತಡೆಯಿಲ್ಲದೆ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಬಹುದು ಎಂದು ಸಚಿವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ