ಕೊರೋನಾ ವೈರಸ್: ಮಹಾರಾಷ್ಟ್ರದಲ್ಲಿ ಇನ್ನೂ 6 ಬಿಎಸ್ಎಫ್ ಸಿಬ್ಬಂದಿಯಲ್ಲಿ ಸೋಂಕು ದೃಢ

ಇಲ್ಲಿನ ಖಾರ್ಘರ್‌ನ ಬಿಎಸ್‌ಎಫ್‌ ನೆಲೆಯಲ್ಲಿ ಇನ್ನೂ ಆರು ಯೋಧರಲ್ಲಿ ವೈರಸ್‌ ಸೋಂಕು ದೃಢಪಟ್ಟಿದ್ದು, ಸೋಂಕಿಗೆ ತುತ್ತಾದ ಯೋಧರ ಸಂಖ್ಯೆ 11ಕ್ಕೆ ಏರಿದೆ.

Published: 03rd April 2020 08:36 PM  |   Last Updated: 03rd April 2020 08:36 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : UNI

ಥಾಣೆ: ಇಲ್ಲಿನ ಖಾರ್ಘರ್‌ನ ಬಿಎಸ್‌ಎಫ್‌ ನೆಲೆಯಲ್ಲಿ ಇನ್ನೂ ಆರು ಯೋಧರಲ್ಲಿ ವೈರಸ್‌ ಸೋಂಕು ದೃಢಪಟ್ಟಿದ್ದು, ಸೋಂಕಿಗೆ ತುತ್ತಾದ ಯೋಧರ ಸಂಖ್ಯೆ 11ಕ್ಕೆ ಏರಿದೆ.

ಬಿಎಸ್‍ಎಫ್‍ ನೆಲೆಯಲ್ಲಿ 139 ಅಧಿಕಾರಿಗಳು ಮತ್ತು 12 ಯೋಧರು ಸೇವೆ ಸಲ್ಲಿಸುತ್ತಿದ್ದು, ಈ ಪೈಕಿ ಐದು ಯೋಧರಲ್ಲಿ ಸೋಂಕು ದೃಢಪಟ್ಟಿದೆ ಎಂದು ಕೊಂಕಣ ವಿಭಾಗೀಯ ಆಯುಕ್ತ ಶಿವಾಜಿರಾವ್ ದೌಂಡ್ ಇಲ್ಲಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೆಲ ದಿನಗಳಿಂದ 142ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು ಇದೀಗ ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ನಿನ್ನೆ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp