ನಾವು ಸ್ವಾವಲಂಬಿಗಳಾಗಬೇಕು ಎಂಬ ಬಹುದೊಡ್ಡ ಪಾಠವನ್ನು ಕೊರೋನಾ ವೈರಸ್ ಹೇಳಿಕೊಟ್ಟಿದೆ: ಪ್ರಧಾನಿ ಮೋದಿ

ಕೊರೋನಾ ವೈರಸ್ ಸೋಂಕು ನಮಗೆ ಜೀವನದಲ್ಲಿ ಸ್ವಾವಲಂಬನೆಯ ಬಹುದೊಡ್ಡ ಪಾಠ ಕಲಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ನವದೆಹಲಿ: ಕೊರೋನಾ ವೈರಸ್ ಸೋಂಕು ನಮಗೆ ಜೀವನದಲ್ಲಿ ಸ್ವಾವಲಂಬನೆಯ ಬಹುದೊಡ್ಡ ಪಾಠ ಕಲಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕೊರೋನಾ ವೈರಸ್ ನಮಗೆ ಜೀವನದಲ್ಲಿ ಅತಿದೊಡ್ಡ ಪಾಠ ಕಲಿಸಿದೆ, ಅದು ನಾವು ಸ್ವಾವಲಂಬಿಗಳಾಗಿರಬೇಕೆಂದು. ಗ್ರಾಮಗಳು ಸ್ವಾವಲಂಬಿಗಳಾಗಿವೆ, ಅದೇ ರೀತಿ ಜಿಲ್ಲೆಗಳು, ರಾಜ್ಯಗಳು ಮತ್ತು ಇಡೀ ದೇಶ ಸ್ವಾವಲಂಬಿಯಾಗಬೇಕು ಎಂದು ಪ್ರಧಾನಿ ಮೋದಿ ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶಾದ್ಯಂತ ಇರುವ ಸರ್ಪಂಚ್(ಪಂಚಾಯತ್ ಮುಖ್ಯಸ್ಥರು) ಗಳ ಜೊತೆ ಮಾತನಾಡುವಾಗ ಹೇಳಿದರು.

ಇಂದು ಪಂಚಾಯತ್ ರಾಜ್ ದಿವಸ ಅಂಗವಾಗಿ ಪ್ರಧಾನಿ ಈ ವಿಡಿಯೊ ಕಾನ್ಫರೆನ್ಸ್ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅವರು ಇ-ಗ್ರಾಮ್ ಸ್ವರಾಜ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದರು.

ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ತೋರಿಸುತ್ತಿರುವ ಬದ್ಧತೆ ಎಲ್ಲರಿಗೂ ಮಾದರಿ ಎಂದು ನಿನ್ನೆ ಪ್ರಧಾನಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com