ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ 21,000 ರೂ ದೇಣಿಗೆ ಕೊಟ್ಟ ಹಾರ್ದಿಕ್ ಪಟೇಲ್

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮ ದೇವಾಲಯಕ್ಕಾಗಿ ಗುಜರಾತ್ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಹಾಗೂ ಅವರ ಕುಟುಂಬ 21,000 ರೂ. ದೇಣಿಗೆ ನೀಡಿದೆ.
ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್

ಅಹಮದಾಬಾದ್: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮ ದೇವಾಲಯಕ್ಕಾಗಿ ಗುಜರಾತ್ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಹಾಗೂ ಅವರ ಕುಟುಂಬ 21,000 ರೂ. ದೇಣಿಗೆ ನೀಡಿದೆ.

ಅಹಮದಾಬಾದ್ ನಲ್ಲಿ ಈ ಸಂಬಂಧ ಹೇಳಿಕೆ ನೀಡಿದ ಪಟೇಲ್ "ತಾವು ಅಪಾರ ಧರ್ಮಶ್ರದ್ದೆಯನ್ನು ಹೊಂದಿದ್ದರೂ ಸಹ ಏಕದೃಷ್ಟಿಯನ್ನು ಹೊಂದಿಲ್ಲ. ಹಾಗೆಯೇ ಈ ದೇವಲಾಯ ನಿರ್ಮಾಣವು ದೇಶದಲ್ಲಿ ರಾಮ ರಾಜ್ಯ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಭಾವಿಸುತ್ತೇನೆ." ಎಂದಿದ್ದಾರೆ

ಯೋಧ್ಯೆಯಲ್ಲಿನ ದೇವಾಲಯದ 'ಭೂಮಿ ಪೂಜೆ ಸಮಾರಂಭದ ಮುನ್ನಾದಿನದಂದು ಈ ಹೇಳಿಕೆ ನೀಡಿದ್ದು ನಾಳಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಇತರ ಮುಖಂಡರು ಮತ್ತು ಧಾರ್ಮಿಕ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

"ಭಗವಾನ್ ಶ್ರೀ ರಾಮನ ದೇವಾಲಯವು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ, ನನಗೂ ನನ್ನ ಕುಟುಂಬಕ್ಕೂ ದೇವರ ಮೇಲೆ ನಂಬಿಕೆ ಇದೆ ಮತ್ತು ಅದಕ್ಕಾಗಿಯೇ ರಾಮ  ದೇವಾಲಯದ ನಿರ್ಮಾಣಕ್ಕಾಗಿ 21,000 ರೂ.ಗಳನ್ನು ದೇಣಿಗೆ ನೀಡಲು ನಿರ್ಧರಿಸಿದ್ದೇವೆ.ಭಾರತ ಮತ್ತು ಗುಜರಾತ್‌ನ 'ರಾಮ ರಾಜ್ಯ'ಕ್ಕೆ ಈ ದೇವಾಲಯ ಪ್ರವೇಶವಾಗಲಿದೆ ಎಂದು ನಾನು ಭಾವಿಸುತ್ತೇನೆ " ಪಟೇಲ್ ಹೇಳಿದ್ದಾರೆ.

ಪಟೇಲ್ ಅವರು 'ರಾಮ ರಾಜ್ಯ' ಎಂಬ ಪದವನ್ನು ವಿಶಾಲ ಅರ್ಥದಲ್ಲಿ ಹೇಳಿದ್ದಾರೆ. ಸಾಮಾನ್ಯ ಜನರಿಗೆ ಸಂಬಂಧಿಸಿದ ಪ್ರಸ್ತುತ ಸಮಸ್ಯೆಗಳೊಂದಿಗೆ ಅದನ್ನು ಸಂಬಂಧ ಕಲ್ಪಿಸಿದ್ದಾರೆ. ರಾಮ ರಾಜ್ಯ ಎಂದರೆ ರೈತರಿಗೆ ಸಮೃದ್ಧಿ, ಯುವಕರಿಗೆ ಉದ್ಯೋಗ, ಮಹಿಳೆಯರ ಸುರಕ್ಷತೆ, ಮಕ್ಕಳಿಗೆ ಉಚಿತ ಮತ್ತು ಗುಣಮಟ್ಟದ ಶಿಕ್ಷಣ, ಗ್ರಾಮಗಳ ಅಭಿವೃದ್ಧಿ ಮತ್ತು ದೇಶದ ಆರ್ಥಿಕ ಬೆಳವಣಿಗೆ. ಎಲ್ಲವೂ ಸೇರಿ ದೇಶವಾಸಿಗಳ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಪಟೇಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com