ಇತಿಹಾಸದಲ್ಲಿ ಇದು ಹೊಸ ಯುಗಾರಂಭದ ಕ್ಷಣ: ರಾಮ ಮಂದಿರ ಭೂಮಿ ಪೂಜೆ ಬಗ್ಗೆ ಮಾತಾ ಅಮೃತಾನಂದಮಯಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಶ-ವಿದೇಶಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. 
ಮಾತಾ ಅಮೃತಾನಂದಮಯಿ
ಮಾತಾ ಅಮೃತಾನಂದಮಯಿ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಶ-ವಿದೇಶಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. 

ಗಣ್ಯ ವ್ಯಕ್ತಿಗಳು ಭೂಮಿ ಪೂಜೆಯ ಮುನ್ನಾ ದಿನ ತಮ್ಮ ಅಭಿಪ್ರಾಯ- ಶುಭಕೋರುವ ಸಂದೇಶಗಳನ್ನು ನೀಡುತ್ತಿದ್ದು, ಮಾತಾ ಅಮೃತಾನಂದಮಯಿ ಅವರೂ ಭೂಮಿ ಪೂಜೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ.

"ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತಿರುವುದು ಇತಿಹಾಸದಲ್ಲಿ ಹೊಸ ಯುಗವೊಂದರ ಆರಂಭದ ಕ್ಷಣ. ಈ ಕ್ಷಣ ಯಾರ ಗೆಲುವೂ ಅಲ್ಲ ಯಾರ ಸೋಲೂ ಅಲ್ಲ. ಬದಲಾಗಿ ಪರಸ್ಪರ ಪ್ರೀತಿಯ, ತಾಳ್ಮೆಯ, ವಿಶಾಲ ಮನೋಭಾವದ ಗೆಲುವಾಗಿದೆ. 

ಈ ಸದ್ಗುಣಗಳು ಶಾಶ್ವತವಾಗಿರಲಿ ಎಂದು ದೈವಿಕ ಅನುಗ್ರಹ ಎಲ್ಲರಿಗೂ ಆಶೀರ್ವದಿಸಲಿ ಎಂದು ಮಾತಾ ಅಮೃತಾನಂದಮಯಿ ಪ್ರಾರ್ಥಿಸಿ, ಶುಭಕೋರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com