ಅಯೋಧ್ಯೆಯ ಭೂಮಿ ಪೂಜೆ, ಇದೊಂದು ಐತಿಹಾಸಿಕ ದಿನ: ಯೋಗ ಗುರು ಬಾಬಾ ರಾಮದೇವ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದ್ದು, ಆಗಸ್ಟ್ 5 'ಐತಿಹಾಸಿಕ ದಿನ' ಎಂದು ಯೋಗಗುರು ರಾಮ್‌ದೇವ್ ಹೇಳಿದ್ದಾರೆ.

Published: 05th August 2020 10:31 AM  |   Last Updated: 05th August 2020 12:41 PM   |  A+A-


baba ramdev

ಬಾಬಾ ರಾಮದೇವ್

Posted By : Shilpa D
Source : ANI

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದ್ದು, ಆಗಸ್ಟ್ 5 'ಐತಿಹಾಸಿಕ ದಿನ' ಎಂದು ಯೋಗಗುರು ರಾಮ್‌ದೇವ್ ಹೇಳಿದ್ದಾರೆ.

ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ರಾಮ್‌ದೇವ್ ಅವರು, ಮಂಗಳವಾರ ಮಧ್ಯಾಹ್ನವೇ ಅಯೋಧ್ಯೆಗೆ ತಲುಪಿದ್ದು, ಭೂಮಿಪೂಜೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮುಂಜಾನೆ ಹನುಮಾನ್ ಗರ್ಹಿ ದೇಗುಲಕ್ಕೆ ಭೇಟಿ ನೀಡಿದ ಅವರು, ಈ ದಿನ (ಆಗಸ್ಟ್ 05) ಐತಿಹಾಸಿಕ ದಿನ ಮತ್ತು ಮುಂದಿನ ತಲೆಮಾರುಗಳು ಬಹಳ ಹೆಮ್ಮೆಯಿಂದ ಈ ದಿನವನ್ನು ನೆನಪಿಸಿಕೊಳ್ಳುತ್ತವೆ ಎಂದು ತಿಳಿಸಿದರು.

ಎಲ್ಲಾ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳ ಅತಿಕ್ರಮಣದ ಅಂತ್ಯವಾಗಿರುತ್ತದೆ. ರಾಮ ದೇವಾಲಯದ ಸ್ಥಾಪನೆಯು ದೇಶದಲ್ಲಿ ಹೊಸ ಸಂಸ್ಕೃತಿಯನ್ನು ಪ್ರಾರಂಭಿಸುತ್ತದೆ' ಎಂದು ತಿಳಿಸಿದರು. 

ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಕುರಿತಂತೆ ಪ್ರಶ್ನಿಸಿದ್ದಕ್ಕೆ, 'ರಾಮ ಮತ್ತು ಹನುಮನ 'ಭಕ್ತ'ನಾಗಿರುವ ಒಬ್ಬ ಪ್ರಧಾನಿಯನ್ನು ನಾವು ಹೊಂದಿದ್ದೇವೆ. ಇದು ನಮ್ಮ ದೇಶದ ಅದೃಷ್ಟ. ಹಿಂದೂ ಧರ್ಮವನ್ನು ಹೆಮ್ಮೆಪಡುವಂತೆ ಮಾಡಿದವರು ನಮ್ಮ ಪ್ರಧಾನಿ ಎಂದು ಹೇಳಿದ ಅವರು ಇನ್ನು ಮುಂದೆ ರಾಮರಾಜ್ಯ ಆರಂಭವಾಗಲಿದೆ ಎಂದರು. ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ.

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp