ಭವಿಷ್ಯದಲ್ಲಿ ದೇಶಕ್ಕೆ ಭದ್ರತೆಯ ಸಮಸ್ಯೆ ಎದುರಾಗಲೂಬಹುದು: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಮಿಲಿಟರಿ ಸಾಹಿತ್ಯವನ್ನು ಸಾಮಾನ್ಯ ಜನತೆಯೊಂದಿಗೆ ಸಂಪರ್ಕಿಸುವ ಬಗ್ಗೆ ನನಗೆ ಅತೀವ ಆಸಕ್ತಿಯಿದೆ, ನಮ್ಮ ಮುಂದಿನ ಜನಾಂಗ ದೇಶದ ಇತಿಹಾಸದ ಬಗ್ಗೆ ಅರ್ಥ ಮಾಡಿಕೊಳ್ಳಲು, ಅದರಲ್ಲೂ ವಿಶೇಷವಾಗಿ ಗಡಿಭಾಗಗಳ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯವಾಗಬಹುದು ಎಂದು ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಮಿಲಿಟರಿ ಸಾಹಿತ್ಯವನ್ನು ಸಾಮಾನ್ಯ ಜನತೆಯೊಂದಿಗೆ ಸಂಪರ್ಕಿಸುವ ಬಗ್ಗೆ ನನಗೆ ಅತೀವ ಆಸಕ್ತಿಯಿದೆ, ನಮ್ಮ ಮುಂದಿನ ಜನಾಂಗ ದೇಶದ ಇತಿಹಾಸದ ಬಗ್ಗೆ ಅರ್ಥ ಮಾಡಿಕೊಳ್ಳಲು, ಅದರಲ್ಲೂ ವಿಶೇಷವಾಗಿ ಗಡಿಭಾಗಗಳ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯವಾಗಬಹುದು ಎಂದು ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಅವರು ಇಂದು ಮಿಲಿಟರಿ ಸಾಹಿತ್ಯ ಸಮ್ಮೇಳನ-2020ನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡುತ್ತಾ, ಇನ್ನೊಂದು ದೃಷ್ಟಿಕೋನದ ಮೂಲಕವೂ ಈ ಕಾರ್ಯಕ್ರಮ ಬಹಳ ಮುಖ್ಯವಾಗುತ್ತದೆ. ಕಾಲ ಬದಲಾಗುತ್ತಿದ್ದಂತೆ ನಮ್ಮ ದೇಶದ ಮೇಲಾಗುತ್ತಿರುವ ಬೆದರಿಕೆಗಳು ಮತ್ತು ಯುದ್ಧದ ರೀತಿಗಳು ಬದಲಾಗುತ್ತಿರುತ್ತವೆ. ಭವಿಷ್ಯದಲ್ಲಿ ನಾವು ಹೆಚ್ಚೆಚ್ಚು ಭದ್ರತೆ ಕುರಿತ ವಿಷಯಗಳಿಗೆ ಆದ್ಯತೆ ನೀಡಬೇಕಾಗಬಹುದು ಎಂದು ಅಭಿಪ್ರಾಯಪಟ್ಟರು.

ನಾನು ರಕ್ಷಣಾ ಇಲಾಖೆ ಸಚಿವನಾದ ನಂತರ ಸಮಿತಿಯನ್ನು ರಚಿಸಿದೆ. ಅದು ನಮ್ಮ ಗಡಿಭಾಗದ ಇತಿಹಾಸ ಮತ್ತು ಅದಕ್ಕೆ ಸಂಬಂಧಪಟ್ಟ ಯುದ್ಧಗಳ ಬಗ್ಗೆ ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com