ಐಐಟಿ ವಾರಣಾಸಿಯಲ್ಲಿ ಇಸ್ರೋ ಬಾಹ್ಯಾಕಾಶ ಶೈಕ್ಷಣಿಕ ಕೇಂದ್ರ ಸ್ಥಾಪನೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡೆಸಲಿರುವ ಅಲ್ಪ ಹಗೂ ದೀರ್ಘಕಾಲೀನ ಯೋಜನೆಗಳಲ್ಲಿ ಅನುಕೂಲವಾಗುವಂತೆ ಐಐಟಿ ವಾರಣಾಸಿಯಲ್ಲಿ "ಪ್ರಾದೇಶಿಕ ಬಾಹ್ಯಾಕಾಶ ಶೈಕ್ಷಣಿಕ ಕೇಂದ್ರ" ಸ್ಥಾಪನೆ ಮಾಡುವುದಾಗಿ ಇಸ್ರೋ ಹೇಳಿದೆ. ಇದಕ್ಕಾಗಿ ಇಸ್ರೋ ವಾರಣಾಸಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
Published: 24th December 2020 08:33 PM | Last Updated: 24th December 2020 08:33 PM | A+A A-

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡೆಸಲಿರುವ ಅಲ್ಪ ಹಗೂ ದೀರ್ಘಕಾಲೀನ ಯೋಜನೆಗಳಲ್ಲಿ ಅನುಕೂಲವಾಗುವಂತೆ ಐಐಟಿ ವಾರಣಾಸಿಯಲ್ಲಿ "ಪ್ರಾದೇಶಿಕ ಬಾಹ್ಯಾಕಾಶ ಶೈಕ್ಷಣಿಕ ಕೇಂದ್ರ" ಸ್ಥಾಪನೆ ಮಾಡುವುದಾಗಿ ಇಸ್ರೋ ಹೇಳಿದೆ. ಇದಕ್ಕಾಗಿ ಇಸ್ರೋ ವಾರಣಾಸಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ವಿದ್ಯಾರ್ಥಿಗಳಲ್ಲಿ ಸಂಶೋಧನೆ ಹಾಗೂ ವೈಜ್ಞಾನಿಕ ತಿಳುವಳಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಈ ನಿರ್ಧಾರ ಸಹಕಾರಿಯಾಗಲಿದೆ ಎಂದು ಇಸ್ರೋ ಪ್ರಧಾನ ಕಚೇರಿಯ ಸಿಬಿಪಿಒಇ ನಿರ್ದೇಶಕ ಪಿವಿ ವೆಂಕಟಕೃಷ್ಣನ್ ಹೇಳಿದ್ದಾರೆ.
ವೆಂಕಟಕೃಷ್ಣನ್ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾನಿಕಯ (ಬಿಎಚ್ ಯು ಐಐಟಿ)ನಿರ್ದೇಶಕ ಪ್ರಮೋದ್ ಕುಮಾರ್ ಜೈನ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಇದು ದೇಶದಲ್ಲಿನ ಇಸ್ರೋದ ಐದನೇ ಪ್ರಾದೇಶಿಕ ಶೈಕ್ಷಣಿಕ ಕೇಂದ್ರವಾಗಿದೆ.