ಒಂದಲ್ಲ, ಎರಡಲ್ಲ 3ನೇ ಬಾರಿಗೆ ನಿರ್ಭಯಾ ಅತ್ಯಾಚಾರಿಗಳ ವಿರುದ್ಧ ಡೆತ್ ವಾರೆಂಟ್, ಮಾರ್ಚ್ 3ಕ್ಕೆ ಗಲ್ಲು ಫಿಕ್ಸ್!

ಎರಡೆರಡು ಬಾರಿ ಡೆತ್ ವಾರೆಂಟ್ ನಿಂದ ತಪ್ಪಿಸಿಕೊಂಡಿದ್ದ ನಿರ್ಭಯಾ ಅತ್ಯಾಚಾರಿಗಳ ವಿರುದ್ಧ ಇದೀಗ ಮತ್ತೆ ಡೆತ್ ವಾರೆಂಟ್ ಜಾರಿಯಾಗಿದ್ದು ಮಾರ್ಚ್ 3ರಂದು ಗಲ್ಲಿಗೆ ದಿನಾಂಕ ನಿಗದಿಯಾಗಿದೆ.

Published: 17th February 2020 04:44 PM  |   Last Updated: 17th February 2020 04:44 PM   |  A+A-


Nirbhaya Rapists

ನಿರ್ಭಯಾ ಅತ್ಯಾಚಾರಿಗಳು

Posted By : Vishwanath S
Source : The New Indian Express

ನವದೆಹಲಿ: ಎರಡೆರಡು ಬಾರಿ ಡೆತ್ ವಾರೆಂಟ್ ನಿಂದ ತಪ್ಪಿಸಿಕೊಂಡಿದ್ದ ನಿರ್ಭಯಾ ಅತ್ಯಾಚಾರಿಗಳ ವಿರುದ್ಧ ಇದೀಗ ಮತ್ತೆ ಡೆತ್ ವಾರೆಂಟ್ ಜಾರಿಯಾಗಿದ್ದು ಮಾರ್ಚ್ 3ರಂದು ಗಲ್ಲಿಗೆ ದಿನಾಂಕ ನಿಗದಿಯಾಗಿದೆ. 

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಇಡೀ ದೇಶವೇ ಎದುರು ನೋಡುತ್ತಿದೆ. ಆದರೆ ಅಪರಾಧಿಗಳ ಕಾನೂನು ಹೋರಾಟದ ನಾಟಕಗಳ ನಂತರ ಇದೀಗ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ದಿನಾಂಕ ನಿಗದಿಯಾಗಿದ್ದು ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ಆರೋಪಿಗಳನ್ನೂ ನೇಣಿಗೇರಿಸಲು ಡೆತ್ ವಾರೆಂಟ್ ಜಾರಿ ಮಾಡಲಾಗಿದೆ. 

ನಾಲ್ವರು ಅತ್ಯಾಚಾರಿಗಳನ್ನು ಒಟ್ಟಿಗೆ ಗಲ್ಲಿಗೇರಿಸಲಾಗುತ್ತದೆ. ಅಪರಾಧಿಗಳಿಗೆ ನೇಣು ಕುಣಿಕೆ ಬಿಗಿಯುವ ಮುನ್ನ ಗಲ್ಲಿಗೇರಿಸುವ ಡಮ್ಮಿ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ತಿಹಾರ್ ಜೈಲಿನಲ್ಲಿ ಒಂದು ಬಾರಿ ಡಮ್ಮಿ ಪ್ರಕ್ರಿಯೆ ನಡೆಸಲಾಗಿತ್ತು.

ನಿರ್ಭಯಾ ಅತ್ಯಾಚಾರಿಗಳಾದ ಮುಖೇಶ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಕುಮಾರ್ ಸಿಂಗ್ ವಿರುದ್ಧ ಡೆತ್ ವಾರೆಂಟ್ ಜಾರಿಗೊಳಿಸಲಾಗಿದೆ.

Stay up to date on all the latest ರಾಷ್ಟ್ರೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp