ನಿರ್ಭಯಾ ಅಪರಾಧಿ ಮಾನಸಿಕ ರೋಗಿ ಎನ್ನುವುದು 'ವಿಕೃತ ಮನಸ್ಸುಗಳ ಕಟ್ಟುಕಥೆ', ವಿನಯ್ ಶರ್ಮಾ ಅರ್ಜಿ ವಜಾ

ನಿರ್ಭಯಾ ಪ್ರಕರಣದ ಅಪರಾಧಿಯೊಬ್ಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಹೇಳಿರುವುದು ಕೇವಲ "ವಿಕೃತ ಸಂಗತಿಗಳ ಕಟ್ಟುಕಥೆ" ಎಂದು ತಿಹಾರ್ ಜೈಲು ಅಧಿಕಾರಿಗಳು ಶನಿವಾರ ಹೇಳಿದರು. ಇದೇ ವೇಳೆ ವಿನಯ್ ಶರ್ಮಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಗಿ ತನಗೆ ಚಿಕಿತ್ಸೆಗೆ ಸಹಕರಿಸಿ ಎಂದು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ

Published: 22nd February 2020 04:48 PM  |   Last Updated: 22nd February 2020 06:44 PM   |  A+A-


ವಿನಯ್ ಶರ್ಮಾ

Posted By : Raghavendra Adiga
Source : PTI

ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಯೊಬ್ಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂದು ಹೇಳಿರುವುದು ಕೇವಲ "ವಿಕೃತ ಸಂಗತಿಗಳ ಕಟ್ಟುಕಥೆ" ಎಂದು ತಿಹಾರ್ ಜೈಲು ಅಧಿಕಾರಿಗಳು ಶನಿವಾರ ಹೇಳಿದರು. ಇದೇ ವೇಳೆ ವಿನಯ್ ಶರ್ಮಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಗಿ ತನಗೆ ಚಿಕಿತ್ಸೆಗೆ ಸಹಕರಿಸಿ ಎಂದು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ

ವಿನಯ್ ಕುಮಾರ್ ಶರ್ಮಾ ಅವರ ಮನವಿಯನ್ನು ಹೆಚ್ಚುವರಿ ಸೆಷನ್ ನ್ಯಾಯಾಧೀಶ ಧರ್ಮೇಂದರ್ ರಾಣಾ ತಿರಸ್ಕರಿಸಿದರು.

ಇದಕ್ಕೆ ಮುನ್ನ  ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಜೌಲು ಅಧಿಕಾರಿಗಳು ಅಪರಾಧಿ ವಿನಯ್ ಕುಮಾರ್ ಶರ್ಮಾ ತಮ್ಮ ದೇಹದ ಮೇಲೆ ಗಾಯಗಳನ್ನು ಮಾಡಿಕೊಂಡಿದ್ದಾರೆ.ಆದರೆ ಯಾವುದೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿಲ್ಲ ಎಂದು ಸಿಸಿಟಿವಿ ದೃಶ್ಯಾವಳಿಗಳು ದೃಷಪಡಿಸಿದೆ ಎಂದರು.

ತಾನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು ತನಗೆ ಚಿಕಿತ್ಸೆ ಕೊಡಿಸಬೇಕೆಂದು ಶರ್ಮಾ ಶುಕ್ರವಾರ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ತನ್ನ ಆದೇಶ ಕಾಯ್ದಿರಿಸಿದ್ದಲ್ಲದೆ ಶನಿವಾರದೊಳಗೆ ಪ್ರತಿಕ್ರಯಿಸುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ಸೂಚಿಸಿತ್ತು.

"ಇದೆಲ್ಲವೂ ಕೇವಲ ವಿಕೃತ ಮನಸ್ಸಿನ ಕಟ್ಟುಕಥೆ, ವೈದ್ಯರು ಆತನ ಪರೀಕ್ಷೆ ನಡೆಸಿದ್ದು ಅವನ ದೇಹಕ್ಕೆ ಮಾತ್ರವೇ ಗಾಯಗಳಾಗಿದೆ ಎನ್ನುವುದನ್ನು ಕಂಡುಕೊಂಡಿದ್ದಾರೆ. ಮತ್ತು ಅದಕ್ಕಾಗಿ ಆತನಿಗೆ ಸೂಕ್ತ ಔಷಧಿಗಳನ್ನು ಒದಗಿಸಿದ್ದಾರೆ.  ಎಲ್ಲಾ ಗಾಯಗಳು ಸ್ವಯಂ ಪ್ರೇರಿತವಾಗಿ ಮಾಡಿಕೊಂಡದ್ದಾಗಿದ್ದು ಮೇಲ್ನೋಟಕ್ಕೆ ಮಾತ್ರ ಆತನಿಗೆ ಗಾಯವಾದಂತೆ ಕಾಣಿಸುತ್ತಿದೆ. ಅಧಿಕಾರಿಗಳನ್ನು ಪ್ರತಿನಿಧಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದರು .

"ವೈದ್ಯಕೀಯ ದಾಖಲೆಗಳು ಶರ್ಮಾ ತಹ ಯಾವುದೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿಲ್ಲ ಎಂದು ಖಚಿತಪಡಿಸಿದೆ. ಹಾಗಾಗಿ  ಯಾವುದೇ ಆಸ್ಪತ್ರೆಯಲ್ಲಿ ಅವರ ತಪಾಸಣೆ ಅಗತ್ಯವಿಲ್ಲ. ಅವರು ಜೈಲು ವೈದ್ಯರಿಂದ ನಿಯಮಿತವಾಗಿ ತಪಾಸಣೆಗೆ ಒಳಗಾಗುತ್ತಾರೆ" ಎಂದು ಅವರು ಹೇಳಿದರು.ಜೈಲು ಅಧಿಕಾರಿಗಳ ಪರ ಹಾಜರಾದ ಮನಶ್ಶಾಸ್ತ್ರಜ್ಞ, ನಾಲ್ವರು ಅಪರಾಧಿಗಳ ನಿಯಮಿತ ವೈದ್ಯಕೀಯ ತಪಾಸಣೆಯನ್ನು ಪ್ರತಿದಿನವೂ ಮಾಡಲಾಗುತ್ತಿದೆ ಮತ್ತು ಅವರೆಲ್ಲರೂ ಉತ್ತಮವಾಗಿದ್ದಾರೆ ಎಂದು ಹೇಳಿದರು. 

"ಅವರು ತಮ್ಮ ತಾಯಿ ಮತ್ತು ವಕೀಲರೊಂದಿಗೆ ಮಾತನಾಡಿದ್ದಾರೆ. ಆದ್ದರಿಂದ ಅವರನ್ನು ಗುರುತಿಸಲು ವಿಫಲವಾಗಿದ್ದಾರೆ ಎನ್ನುವುದು ಸುಳ್ಳು" ಪ್ರಾಸಿಕ್ಯೂಟರ್ ಹೇಳಿದರು.ಅಪರಾಧಿ ಕೈಯಲ್ಲಿ ಪ್ಲ್ಯಾಸ್ಟರ್ ಇದ್ದು, ಅದು ಅವನಿಗೆ ಸಣ್ಣ ಪುಟ್ಟ ಗಾಯವಾಗಿರುವುದನ್ನು ಹೇಳುತ್ತದೆ ಹೊರತು ಗಂಭೀರ ಕಾಯಿಲೆ ಇಲ್ಲಎಂದು ಪ್ರತಿವಾದಿ ವಕೀಲರು ಹೇಳಿದ್ದಾರೆ.

ಆದರೆ ಈ ವೇಳೆ ಅಪರಾಧಿಯ ಪರ ವಕೀಲರು ಜೈಲಿನಲ್ಲಿ ಶರ್ಮಾಗೆ ಆದ ಗಾಯಗಳ ಸಂಗತಿಯನ್ನು ನ್ಯಾಯಾಲಯದಿಂದ ಏಕೆ ಮರೆಮಾಡಲಾಗಿದೆ? ದಾಖಲೆಗಳನ್ನು ಏಕೆ ಸಲ್ಲಿಸಲಾಗುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ನಿರ್ಭಯಾ ಪ್ರಕರಣದ ನಾಲ್ವರಿಗೆ  ಮಾರ್ಚ್ 3 ರಂದು ಬೆಳಿಗ್ಗೆ 6 ಗಂಟೆಗೆ ಮರಣದಂಡನೆ ವಿಧಿಸಲು ನ್ಯಾಯಾಲಯವು ಫೆಬ್ರವರಿ 17 ರಂದು ಹೊಸದಾಗಿ  ಡೆತ್ ವಾರಂಟ್ ಹೊರಡಿಸಿತ್ತು.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp