ಬಾಲಕೋಟ್ ವಾಯುದಾಳಿ: ಅಂದಿನ ವಾಯುಪಡೆ ಮುಖ್ಯಸ್ಥ ಧಾನೋವಾ ಹೇಳಿದ್ದೇನು?

ಬಾಲಕೋಟ್ ವಾಯುದಾಳಿ ಭಾರತೀಯ ಸೇನೆಯ ಕಾರ್ಯಾಚರಣೆಯ ದಿಕ್ಕನ್ನೇ ಬದಲಿಸಿದೆ ಎಂದು ವಾಯುಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್.ಧಾನೋವಾ ಹೇಳಿದ್ದಾರೆ.
ಬಿ ಎಸ್ ಧಾನೋವಾ
ಬಿ ಎಸ್ ಧಾನೋವಾ

ನವದೆಹಲಿ: ಬಾಲಕೋಟ್ ವಾಯುದಾಳಿ ಭಾರತೀಯ ಸೇನೆಯ ಕಾರ್ಯಾಚರಣೆಯ ದಿಕ್ಕನ್ನೇ ಬದಲಿಸಿದೆ ಎಂದು ವಾಯುಪಡೆಯ ಮಾಜಿ ಮುಖ್ಯಸ್ಥ ಬಿ.ಎಸ್.ಧಾನೋವಾ ಹೇಳಿದ್ದಾರೆ.


ಬಾಲಕೋಟ್ ವಾಯುದಾಳಿ ನಡೆದು ಒಂದು ವರ್ಷವಾಗಿದೆ. ಹಿಂತಿರುಗಿ ನೋಡಿದರೆ ತೃಪ್ತಿಯಾಗುತ್ತದೆ. ನಾವು ಈ ಒಂದು ವರ್ಷದಲ್ಲಿ ಸಾಕಷ್ಟು ಪಾಠ ಕಲಿತಿದ್ದೇವೆ. ಹಲವು ವಿಷಯಗಳನ್ನು ಜಾರಿಗೆ ತರಲಾಗಿದೆ. ವಾಸ್ತವವಾಗಿ ನಮ್ಮ ಕಾರ್ಯಾಚರಣೆ ಶೈಲಿಯಲ್ಲಿ ಬದಲಾವಣೆಯಾಗಿದೆ. ಪಾಕಿಸ್ತಾನದವರು ನಾವು ಅವರ ನೆಲದಲ್ಲಿ ಹೋಗಿ ಉಗ್ರಗಾಮಿಗಳ ಶಿಬಿರ ನೆಲೆಗಳ ಮೇಲೆ ದಾಳಿ ಮಾಡಬಹುದು ಎಂದು ಎಣಿಸಿರಲಿಲ್ಲ. ಆದರೆ ನಾವದನ್ನು ಯಶಸ್ವಿಯಾಗಿ ಮಾಡಿ ತೋರಿಸಿದೆವು. ಇದೊಂದು ಮಾದರಿಯ ಬದಲಾವಣೆಯಾಗಿದ್ದು ನಾವದನ್ನು ಯಶಸ್ವಿಯಾಗಿ ಮಾಡಿ ತೋರಿಸಿದ್ದೇವೆ ಎಂದು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.


ಬಾಲಕೋಟ್ ವಾಯುದಾಳಿ ನಂತರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಪ್ರಮುಖ ಭಯೋತ್ಪಾದಕ ದಾಳಿ ನಡೆದಿರಲಿಲ್ಲ. ಏಕೆಂದರೆ ಭಾರತ ತಕ್ಕ ಪ್ರತ್ಯುತ್ತರ ನೀಡಿತ್ತು. ಶತ್ರುಗಳ ಮೇಲೆ ದಾಳಿ ಮಾಡುವುದು ಭಾರತ ಸೇನೆಯ ಮೂರೂ ಪಡೆಗಳ ಜಂಟಿ ಕಾರ್ಯಾಚರಣೆ. ಸರ್ಕಾರ ನಮಗೆ ಆದೇಶ ನೀಡಿದಾಗ ಮೂರೂ ಸೇನೆಗಳು ಸನ್ನದ್ಧವಾದವು. ಅದು ಕೇವಲ ವಾಯುಪಡೆಯ ಕಾರ್ಯಾಚರಣೆ ಮಾತ್ರವಾಗಿರಲಿಲ್ಲ. ಪಾಕಿಸ್ತಾನದ ಜೊತೆ ಪರಿಸ್ಥಿತಿ ಉಲ್ಭಣವಾದಾಗ ಸೇನೆಯ ಮೂರೂ ವಿಭಾಗಗಳು ಅಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದರೆ ನಾವು ಸುಲಭವಾಗಿ ಅವರನ್ನು ಮಣಿಸಬಹುದು ಎಂದು ಧಾನೋವಾ ಹೇಳಿದರು.


ಅಂದಿನ ವಾಯುದಾಳಿ ಬಗ್ಗೆ ಧಾನೋವ್ ಏನಂದರು: ಸರ್ಕಾರದಿಂದ ನಮಗೆ ವಾಯುದಾಳಿಗೆ ಹಸಿರು ನಿಶಾನೆ ಸಿಕ್ಕಿದ ಕೂಡಲೇ ವಾಯುಪಡೆ ದಾಳಿ ನಡೆಸಿತು. ಕಾರ್ಯಾಚರಣೆ ಮುಗಿದ ನಂತರ ನಾನೇ ಖುದ್ದಾಗಿ ರಾಷ್ಟ್ರದ ನಾಯಕರಿಗೆ ಮತ್ತು ಉಳಿದೆರಡು ಸೇನೆಗಳ ಮುಖ್ಯಸ್ಥರಿಗೆ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ತಿಳಿಸಿದೆ. ಅವರು ಸಂತೋಷಪಟ್ಟರು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com