ಗಲಭೆ ಜೀವನದ ಭಾಗ: ದೆಹಲಿ ಹಿಂಸಾಚಾರಕ್ಕೆ ಹರಿಯಾಣ ಸಚಿವರ ಪ್ರತಿಕ್ರಿಯೆ

34 ಮಂದಿಯನ್ನು ಬಲಿ ಪಡೆದ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹರಿಯಾಣ ಸಚಿವ ರಂಜಿತ್ ಚೌಟಾಲ ಅವರು. ಗಲಭೆ ಜೀವನ ಒಂದು ಭಾಗ ಎಂದು ಗುರುವಾರ ಹೇಳಿದ್ದಾರೆ.
ದೆಹಲಿ ಹಿಂಸಾಚಾರ
ದೆಹಲಿ ಹಿಂಸಾಚಾರ

ನವದೆಹಲಿ: 34 ಮಂದಿಯನ್ನು ಬಲಿ ಪಡೆದ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹರಿಯಾಣ ಸಚಿವ ರಂಜಿತ್ ಚೌಟಾಲ ಅವರು. ಗಲಭೆ ಜೀವನ ಒಂದು ಭಾಗ ಎಂದು ಗುರುವಾರ ಹೇಳಿದ್ದಾರೆ.

ಗಲಭೆಗಳು ಆಗಾಗ ನಡೆಯುತ್ತವೆ. ಈ ಹಿಂದೆಯೂ ನಡೆದಿವೆ. ಇಂದಿರಾ ಗಾಂಧಿ ಹತ್ಯೆಯಾದಾಗ ಇಡೀ ದೆಹಲಿಯೇ ಹೊತ್ತಿ ಉರಿದಿತ್ತು. ಗಲಭೆ ಜೀವನದ ಭಾಗ ಎಂದು ಚೌಟಾಲ ಅವರು ವರದಿಗಾರರಿಗೆ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ ಇಂದು 34ಕ್ಕೆ ಏರಿಕೆಯಾಗಿದೆ.

ಕಳೆದ ಭಾನುವಾರದಿಂದ ಆರಂಭವಾದ ಹಿಂಸಾಚಾರದಲ್ಲಿ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ದವರ ಪೈಕಿ ಇಬ್ಬರು ಗುರುವಾರ ಮೃತರಾಗಿದ್ದು, ದೆಹಲಿಯ ಲೋಕನಾಯಕ ಜಯ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಓರ್ವ ಗಾಯಾಳು ಮತೃಪಟ್ಟಿದ್ದಾರೆ. ಆ ಮೂಲಕ ದೆಹಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ ಇದೀಗ 34ಕ್ಕೇರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com