ದೆಹಲಿ ನೂತನ ಪೊಲೀಸ್ ಆಯುಕ್ತರಾಗಿ ಎಸ್ ಎನ್ ಶ್ರೀವಾಸ್ತವ ನೇಮಕ 

ಹಿರಿಯ ಐಪಿಎಸ್ ಅಧಿಕಾರಿ ಎಸ್ ಎನ್ ಶ್ರೀವಾಸ್ತವ ಅವರನ್ನು ಕೇಂದ್ರ ಸರ್ಕಾರ ಶುಕ್ರವಾರ ದೆಹಲಿಯ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದೆ.
ಎಸ್ ಎನ್ ಶ್ರೀವಾಸ್ತವ
ಎಸ್ ಎನ್ ಶ್ರೀವಾಸ್ತವ

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಎಸ್ ಎನ್ ಶ್ರೀವಾಸ್ತವ ಅವರನ್ನು ಕೇಂದ್ರ ಸರ್ಕಾರ ಶುಕ್ರವಾರ ದೆಹಲಿಯ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದೆ.


1985ನೇ ವಿಭಾಗದ ಅರುಣಾಚಲ ಪ್ರದೇಶ-ಗೋವಾ-ಮಿಜೋರಂ ಮತ್ತು ಕೇಂದ್ರಾಡಳಿತ ಪ್ರದೇಶ(ಎಜಿಎಂಯುಟಿ) ಶ್ರೇಣಿಯ ಐಪಿಎಸ್ ಅಧಿಕಾರಿ ಶ್ರೀವಾಸ್ತವ ಆಗಿದ್ದಾರೆ. ಒಂದು ತಿಂಗಳ ವಿಸ್ತರಣಾವಧಿಯ ಸೇವೆಯಲ್ಲಿದ್ದ ಅಮೂಲ್ಯ ಪಾಟ್ನಾಯಕ್ ಅವರ ದೆಹಲಿ ಪೊಲೀಸ್ ಆಯುಕ್ತ ಸೇವೆ ನಾಳೆಗೆ ಮುಕ್ತಾಯವಾಗಲಿದೆ.


ಈಗಾಗಲೇ ವಿಶೇಷ ಆಯುಕ್ತರಾಗಿರುವ ಶ್ರೀವಾಸ್ತವ ಅವರಿಗೆ ಮಾರ್ಚ್ 1ರವರೆಗೆ ಮತ್ತು ಮುಂದಿನ ಆದೇಶ ಬರುವವರೆಗೆ ದೆಹಲಿ ಪೊಲೀಸ್ ಆಯುಕ್ತರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. 


ಈ ಹಿಂದೆ ದೆಹಲಿ ಪೊಲೀಸ್ ವಿಶೇಷ ಘಟಕದ ಮುಖ್ಯಸ್ಥರಾಗಿದ್ದ ಶ್ರೀವಾಸ್ತವ ಮುಜಾಹಿದ್ದೀನ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೆಲ ದಿನಗಳ ಹಿಂದಷ್ಟೇ ಈಶಾನ್ಯ ದೆಹಲಿಯಲ್ಲಿ ಉಂಟಾದ ತೀವ್ರ ಹಿಂಸಾಚಾರದಿಂದ ಅಪಾರ ಸಾವು ನೋವಿನ ನಂತರ ದೆಹಲಿ ಪೊಲೀಸರು ಪರಿಸ್ಥಿತಿಯನ್ನು ನಿರ್ವಹಿಸಿದ ರೀತಿಗೆ ವ್ಯಾಪಕ ಟೀಕೆ ಬಂದಿತ್ತು. ಈ ಹಿನ್ನಲೆಯಲ್ಲಿ ಅಮೂಲ್ಯ ಪಾಟ್ನಾಯಕ್ ಅವರನ್ನು ತುರ್ತಾಗಿ ಸರ್ಕಾರ ಬದಲಾಯಿಸಿರಲೂಬಹುದು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com