ಕಾಂಗ್ರೆಸ್ ಪ್ರಕಟಿಸಿದ ವಿವಾದಿತ ಕಿರು ಪುಸ್ತಕ ನಿಷೇಧಿಸುವಂತೆ ಸಾವರ್ಕರ್ ಮೊಮ್ಮಗ ಆಗ್ರಹ

'ವೀರ್  ಸಾವರ್ಕರ್  ಕಿತ್ನೆ ವೀರ್.. ?’ ಶೀರ್ಷಿಕೆಯಡಿ  ಕಾಂಗ್ರೆಸ್ ಪಕ್ಷದ ಸೇವಾದಳ ವಿಭಾಗ ಪ್ರಕಟಿಸಿರುವ  ಕಿರು ಪುಸ್ತಕವನ್ನು ಕೂಡಲೇ ನಿಷೇಧಿಸಬೇಕು ಎಂದು ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್  ಅವರು ಶುಕ್ರವಾರ ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Published: 03rd January 2020 02:56 PM  |   Last Updated: 03rd January 2020 02:56 PM   |  A+A-


Booklets

ಕಾಂಗ್ರೆಸ್ ಕೈಪಿಡಿ

Posted By : Lingaraj Badiger
Source : UNI

ಭೋಪಾಲ್: 'ವೀರ್  ಸಾವರ್ಕರ್  ಕಿತ್ನೆ ವೀರ್.. ?’ ಶೀರ್ಷಿಕೆಯಡಿ  ಕಾಂಗ್ರೆಸ್ ಪಕ್ಷದ ಸೇವಾದಳ ವಿಭಾಗ ಪ್ರಕಟಿಸಿರುವ  ಕಿರು ಪುಸ್ತಕವನ್ನು ಕೂಡಲೇ ನಿಷೇಧಿಸಬೇಕು ಎಂದು ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್  ಅವರು ಶುಕ್ರವಾರ ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಭೋಪಾಲ್‌ನಲ್ಲಿ  ನಡೆಯುತ್ತಿರುವ ಹತ್ತು ದಿನಗಳ ತರಬೇತಿ ಶಿಬಿರದಲ್ಲಿ ಈ ಕಿರು ಪುಸ್ತಕವನ್ನು ವಿತರಿಸಿರುವ ಕಾಂಗ್ರೆಸ್  ಸೇವಾದಳದ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಹಿಂದೂ ಮಹಾಸಭಾದ ಸಹ ಸಂಸ್ಥಾಪಕರಾಗಿದ್ದ ವಿನಾಯಕ್ ದಾಮೋದರ್ ಸಾವರ್ಕರ್, ಗಾಂಧಿ  ಹಂತಕ ನಾಥುರಾಮ್ ಗೋಡ್ಸೆಯೊಂದಿಗೆ 'ದೈಹಿಕ ಸಂಬಂಧ’ ಹೊಂದಿದ್ದರು ಎಂದು ಕಿರು ಪುಸ್ತಕದಲ್ಲಿ ಹೇಳಲಾಗಿದೆ. ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲಪೈರ್ ರಚಿಸಿರುವ  “ಫ್ರೀಡಮ್ ಅಟ್ ಮಿಡ್ನೈಟ್ “ ಪುಸ್ತಕದ 423ನೇ ಪುಟದಲ್ಲಿರುವ ಮಾಹಿತಿ  ಉಲ್ಲೇಖಿಸಿ ಕಿರು ಪುಸ್ತಕ ಮುದ್ರಿಸಲಾಗಿದೆ. 

ಈ ಕೈಪಿಡಿಯನ್ನು ಸೇವಾದಳದ ಮುಖ್ಯಸ್ಥ ಲಾಲ್ಜಿ ದೇಸಾಯಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಸಾಕ್ಷ್ಯಗಳ ಆಧಾರದ ಮೇಲೆ  ಲೇಖಕರು ಕೃತಿಯನ್ನು ರಚಿಸಿದ್ದಾರೆ. ಅವರು (ಸಾವರ್ಕರ್) 'ಸಲಿಂಗಕಾಮಿ’ ಹೌದೋ, ಅಲ್ಲವೂ ಎಂಬದು ಮುಖ್ಯ ವಿಷಯವಲ್ಲ. ತಮಗೆ ಇಚ್ಚಿಸಿದ ರೀತಿ ಬದುಕಲು ಪ್ರತಿಯೊಬ್ಬರೂ ಕಾನೂನುಬದ್ಧ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ಬಿಜೆಪಿ ವೀರ ನಾಯಕರು ಎಂದು ಬಣ್ಣಿಸುವ ವ್ಯಕ್ತಿಗಳ ನೈಜ ಸ್ವರೂಪವನ್ನು ಜನರು ತಿಳಿದುಕೊಳ್ಳುವ ಅವಶ್ಯಕತೆಯಿದೆ ಎಂದು  ಹೇಳಿದ್ದಾರೆ.

ಕಿರು ಪುಸ್ತಕದ ಬಗ್ಗೆ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಾವರ್ಕರ್ ಅವರ ಪ್ರತಿಷ್ಠೆಯನ್ನು ಹಾಳುಮಾಡಲು ಸಂಚು ರೂಪಿಸಲಾಗಿದೆ.  ಕಾಂಗ್ರೆಸ್  ಪಕ್ಷದ ಸೇವಾದಳ  ಅನುಚಿತ  ಆರೋಪದೊಂದಿಗೆ   ದೇಶದಲ್ಲಿ ಅರಾಜಕತೆಯನ್ನು ಹರಡುತ್ತಿದೆ. ರಾಜ್ಯ  ಸರ್ಕಾರ  ಕೂಡಲೇ  ಕಾಂಗ್ರೆಸ್ ಸೇವಾದಳದ ಮೇಲೆ ಮೇಲೆ ಕ್ರಮ ಕೈಗೊಳ್ಳಬೇಕು. ಕಾರಣ ಕರ್ತರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು  ಆಗ್ರಹಿಸಿದ್ದಾರೆ. ಐಪಿಸಿ  ಸೆಕ್ಷನ್ 120, 500, 503, 504, 505ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು  ಕಿರು ಹೊತ್ತಿಗೆಯನ್ನು ರಾಜ್ಯ ಸರ್ಕಾರ  ಕೂಡಲೇ  ನಿಷೇಧಿಸಬೇಕು ಎಂದು ರಂಜಿತ್ ಸಾವರ್ಕರ್ ಒತ್ತಾಯಿಸಿದ್ದಾರೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp