ವಿದ್ಯಾರ್ಥಿಗಳು-ಆಡಳಿತ ಮಂಡಳಿ ಭಿನ್ನಾಭಿಪ್ರಾಯ ಕೊನೆಗಾಣಿಸಲು ಜೆಎನ್ ಯು ಉಪಕುಲಪತಿಗಳಿಗೆ ಎಚ್ಚರಿಕೆ! 

ಜೆಎನ್ ಯು ವಿದ್ಯಾರ್ಥಿಗಳು ಹಾಗೂ ಆಡಳಿತಮಂಡಳಿ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅಂತಿಮ ಎಚ್ಚರಿಕೆ ವಿಧಿಸಿದೆ. 
ವಿದ್ಯಾರ್ಥಿಗಳು-ಆಡಳಿತ ಮಂಡಳಿ ಭಿನ್ನಾಭಿಪ್ರಾಯ ಕೊನೆಗಾಣಿಸಲು ಜೆಎನ್ ಯು ಉಪಕುಲಪತಿಗಳಿಗೆ ಎಚ್ಚರಿಕೆ! 

ನವದೆಹಲಿ: ಜೆಎನ್ ಯು ವಿದ್ಯಾರ್ಥಿಗಳು ಹಾಗೂ ಆಡಳಿತಮಂಡಳಿ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಅಂತಿಮ ಎಚ್ಚರಿಕೆ ವಿಧಿಸಿದೆ. 

ಇತ್ತೀಚೆಗೆ ಜೆಎನ್ ಯು ಆಡಳಿತಮಂಡಳಿ ಹಾಗೂ ಹೆಚ್ ಆರ್ ಡಿ ಅಧಿಕಾರಿಗಳ ಸಭೆ ನಡೆದಿತ್ತು. ಈ ವೇಳೆ ಅಕ್ಷರಶಹ ಕಠಿಣ ಸಂದೇಶ, ಗಡುವನ್ನು ರವಾನೆ ಮಾಡಿರುವ ಹೆಚ್ ಆರ್ ಡಿ ಸಚಿವಾಲಯ, ಸೇವೆ ಮತ್ತು ಯುಟಿಲಿಟಿ ಶುಲ್ಕಗಳನ್ನು ತೆಗೆದುಹಾಕಿರುವ ಆಡಳಿತ ಮಂಡಳಿಯ ನಿರ್ಧಾರವನ್ನು ಏಕೆ ಸರಿಯಾಗಿ ಪ್ರಚಾರ ಮಾಡಿಲ್ಲ ಇದರಿಂದ ಆಡಳಿತಮಂಡಳಿ ಹಾಗೂ ವಿದ್ಯಾರ್ಥಿಗಳ ನಡುವೆ ಭಿನ್ನಾಭಿಪ್ರಾಯ ತಲೆದೋರುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಿದೆ. 

ಉಪಕುಲಪತಿ ಜಗದೀಶ್ ಕುಮಾರ್ ಅವರು 2019 ರ ಡಿಸೆಂಬರ್ ನಲ್ಲಿಯೇ ಶುಲ್ಕಗಳನ್ನು ಕೈಬಿಡುವ ನಿರ್ಧಾರ ಕೈಗೊಂಡಿದ್ದರೂ ಅದನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಲು ವಿಫಲರಾಗಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

ವಿದ್ಯಾರ್ಥಿಗಳು ಸೇವೆ ಹಾಗೂ ಯುಟಿಲಿಟಿ ಶುಲ್ಕಗಳನ್ನು ಪಾವತಿ ಮಾಡದೇ ಇರುವ ನಿರ್ಧಾರ ಕೈಗೊಂಡ ನಂತರ ಅದನ್ನು ಏಕೆ ಸರಿಯಾಗಿ ಪ್ರಚಾರ ಮಾಡಲಿಲ್ಲ? ನೀವು ಅದನ್ನು ವಿದ್ಯಾರ್ಥಿಗಳಿಗೆ ಸರಿಯಾಗಿ ಮನದಟ್ಟು ಮಾಡಬೇಕಿತ್ತು ಎಂದು ಉಪಕುಲಪತಿಗಳಿಗೆ ಹೆಚ್ ಆರ್ ಡಿಯ ಹಿರಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. 

ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ್ದ ಹೆಚ್ ಆರ್ ಡಿ, ಸಮಸ್ಯೆ ಬಗೆಹರಿಸಲು ಕಳೆದ ತಿಂಗಳು ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಈಗ ಕಠಿಣ ಎಚ್ಚರಿಕೆ ನೀಡಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com