ಸಿಎಎ ವಿರೋಧಿ ಪ್ರತಿಭಟನೆ ವೇಳೆ ರೈಲ್ವೆ ಆಸ್ತಿ ಹಾನಿ: 21 ಮಂದಿ ಬಂಧನ, ಅವರಿಂದಲೇ ನಷ್ಟ ವಸೂಲಿ

ಕೇಂದ್ರ ಸರ್ಕಾರದ ವಿವಾದಾತ್ಮ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಇದುವರೆಗೆ 21 ಮಂದಿಯನ್ನು ಬಂಧಿಸಲಾಗಿದ್ದು, ಅವರಿಂದ ರೈಲ್ವೆ ಆಸ್ತಿ ಹಾನಿಯಾಗಿದ್ದು,...
ಇಂಡಿಯನ್ ರೈಲ್ವೆ
ಇಂಡಿಯನ್ ರೈಲ್ವೆ

ನವದೆಹಲಿ: ಕೇಂದ್ರ ಸರ್ಕಾರದ ವಿವಾದಾತ್ಮ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಇದುವರೆಗೆ 21 ಮಂದಿಯನ್ನು ಬಂಧಿಸಲಾಗಿದ್ದು, ಅವರಿಂದ ರೈಲ್ವೆ ಆಸ್ತಿ ಹಾನಿಯಾಗಿದ್ದು, ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು ಎಂದು ರೈಲ್ವೆ ರಕ್ಷಣಾ ಪಡೆ(ಆರ್ ಪಿಎಫ್)ಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ, ಬಿಹಾರ ಮತ್ತು ಅಸ್ಸಾಂನಲ್ಲಿ ನಡೆದ ಹಿಂಸಾತ್ಮಾಕ ಪ್ರತಿಭಟನೆಯಿಂದ ರೇಲ್ವೆ ಇಲಾಖೆಯ 87.99 ಕೋಟಿ ರೂಪಾಯಿ ಆಸ್ತಿ ಹಾನಿಯಾಗಿದೆ. ಈ ಮೊತ್ತವನ್ನು ಬಂಧಿತರಿಂದಲೇ ವಸೂಲಿ ಮಾಡಲಾಗುವುದು ಎಂದು ಆರ್ ಪಿಎಫ್ ಅಧಿಕಾರಿ ಹೇಳಿದ್ದಾರೆ.

ಮೋದಿ ಸರ್ಕಾರ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ ನಂತರ ದೇಶಾದ್ಯಂತ ಉಗ್ರ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ ಹಲವು ಬಸ್, ವಾಹನ ಹಾಗೂ ರೈಲುಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಲಾಗಿತ್ತು.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೇಲ್ವೆ ಪೊಲೀಸರು 27 ಕೇಸ್ ಗಳನ್ನು, ಆರ್ ಪಿಎಫ್ 54 ಕೇಸ್ ಗಳನ್ನು ಹಾಗೂ ಸ್ಥಳೀಯ ಪೊಲೀಸರು ಸಹ ಹಲವು ಕೇಸ್ ಗಳನ್ನು ದಾಖಲಿಸಿದ್ದಾರೆ. ಇದುವರೆಗೆ 21 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಕೆಲವರನ್ನು ಸ್ಥಳದಲ್ಲೇ ಬಂಧಿಸಿದರೆ, ಇನ್ನು ಕೆಲವರನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ನಂತರ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com