ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ನಿರ್ಭಯಾ ಗ್ಯಾಂಗ್ ರೇಪ್ ಅಪರಾಧಿ ವಿನಯ್ ಶರ್ಮ 

'ನಾನು ಇರುವುದರಿಂದ ನನ್ನ ಪೋಷಕರು ಜೀವಂತವಾಗಿದ್ದಾರೆ. ಹೀಗಾಗಿ ನಾನು ಸಾಯಬೇಕೆಂದಿದ್ದ ಯೋಚನೆಯನ್ನು ನನ್ನ ಪೋಷಕರನ್ನು ಭೇಟಿ ಮಾಡಿದ ನಂತರ ಬದಲಾಯಿಸಿಕೊಂಡಿದ್ದೇನೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಿರುವ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿ ವಿನಯ್ ಶರ್ಮ ಹೇಳಿಕೊಂಡಿದ್ದಾನೆ.

Published: 30th January 2020 11:09 AM  |   Last Updated: 30th January 2020 11:21 AM   |  A+A-


Posted By : Sumana Upadhyaya
Source : ANI

ನವದೆಹಲಿ: 'ನಾನು ಇರುವುದರಿಂದ ನನ್ನ ಪೋಷಕರು ಜೀವಂತವಾಗಿದ್ದಾರೆ. ಹೀಗಾಗಿ ನಾನು ಸಾಯಬೇಕೆಂದಿದ್ದ ಯೋಚನೆಯನ್ನು ನನ್ನ ಪೋಷಕರನ್ನು ಭೇಟಿ ಮಾಡಿದ ನಂತರ ಬದಲಾಯಿಸಿಕೊಂಡಿದ್ದೇನೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಿರುವ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿ ವಿನಯ್ ಶರ್ಮ ಹೇಳಿಕೊಂಡಿದ್ದಾನೆ.


ಆತನು ರಾಷ್ಟ್ರಪತಿಗಳಿಗೆ ಬರೆದಿರುವ ಕ್ಷಮಾದಾನ ಅರ್ಜಿಯಲ್ಲಿ, ತನ್ನ ಪರ ವಕೀಲ ಎ ಪಿ ಸಿಂಗ್ ಮೂಲಕ ಮನದ ಭಾವನೆಗಳನ್ನು ತಿಳಿಸಲು ಬಯಸುತ್ತಿದ್ದು ಜೈಲಿನಲ್ಲಿರುವಾಗ ಸಾಕಷ್ಟು ಮಾನಸಿಕ ಕಿರುಕುಳ ಅನುಭವಿಸಿದ್ದೇನೆ, ಅದನ್ನು ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿಕೊಂಡಿದ್ದೇನೆ ಎಂದಿದ್ದಾನೆ. ತನ್ನ ಪರ ವಕೀಲ ಎ ಪಿ ಸಿಂಗ್ ಗೆ ಮೌಖಿಕವಾಗಿ ತನ್ನ ನೋವುಗಳನ್ನು ಹಂಚಿಕೊಳ್ಳಲು ಸಮಯಾವಕಾಶ ನೀಡಬೇಕೆಂದು ಸಹ ರಾಷ್ಟ್ರಪತಿಗಳನ್ನು ಮನವಿ ಮಾಡಿಕೊಂಡಿದ್ದಾನೆ.


ನಿನ್ನೆಯಷ್ಟೇ ಮತ್ತೊಬ್ಬ ಅಪರಾಧಿ ಮುಕೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.ಇಂದು ಅಕ್ಷಯ್ ಕುಮಾರ್ ಠಾಕೂರ್ ಸಲ್ಲಿಸಿರುವ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಲಿಸಲಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp