ಅಧಿವೇಶನ ಕರೆಯಲು ರಾಜ್ಯಪಾಲರಿಗೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ರಾಜಸ್ತಾನ ಸರ್ಕಾರ ನಿರ್ಧಾರ

ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲ ಕಲರಾಜ್ ಮಿಶ್ರಾ ಅವರ ಮೇಲೆ ಒತ್ತಡ ಹಾಕಲು ಪ್ರಸ್ತಾವನೆಯನ್ನು ಪರಿಷ್ಕರಿಸಲು ರಾಜಸ್ತಾನ ಸಚಿವ ಸಂಪುಟ ಶನಿವಾರ ಮತ್ತೊಮ್ಮೆ ಭೇಟಿ ಮಾಡಲಿದೆ.
ಜೈಪುರದಲ್ಲಿ ರಾಜಭವನದ ಹೊರಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಇತರರು
ಜೈಪುರದಲ್ಲಿ ರಾಜಭವನದ ಹೊರಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಇತರರು

ಜೈಪುರ: ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲ ಕಲರಾಜ್ ಮಿಶ್ರಾ ಅವರ ಮೇಲೆ ಒತ್ತಡ ಹಾಕಲು ಪ್ರಸ್ತಾವನೆಯನ್ನು ಪರಿಷ್ಕರಿಸಲು ರಾಜಸ್ತಾನ ಸಚಿವ ಸಂಪುಟ ಶನಿವಾರ ಮತ್ತೊಮ್ಮೆ ಭೇಟಿ ಮಾಡಲಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಕಾಂಗ್ರೆಸ್ ಶಾಸಕರಿಂದ ಭಿನ್ನಮತವನ್ನು ಎದುರಿಸುತ್ತಿದ್ದು ನಿನ್ನೆ ಹೈಕೋರ್ಟ್ ತೀರ್ಪು ಹೊರಬಂದ ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ರಾತ್ರಿ ಸಚಿವ ಸಂಪುಟ ಸಭೆ ನಡೆಸಿ ರಾಜ್ಯಪಾಲರು ಎತ್ತಿರುವ ಅಂಶಗಳನ್ನು ಇಂದಿನ ಪ್ರಸ್ತಾವನೆಯಲ್ಲಿ ಸೇರಿಸಲು ಮಾತುಕತೆ, ಚರ್ಚೆಗಳು ನಡೆಯಲಿವೆ.

ಕಳೆದ ರಾತ್ರಿ ಸಂಪುಟ ಸಭೆಯಲ್ಲಿ, ವಿಧಾನಸಭೆ ಅಧಿವೇಶನ ಕರೆಯುವ ಬಗ್ಗೆ ರಾಜ್ಯಪಾಲರು ಎತ್ತಿರುವ ಅಂಶಗಳನ್ನು ಚರ್ಚಿಸಲಾಯಿತು. ಇಂದು ಮತ್ತೆ ಸಂಪುಟ ಸಭೆ ಸೇರಲಿದ್ದು ಪರಿಷ್ಕೃತ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ರವಾನಿಸಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರ ಅಧಿವೇಶನ ಕರೆಯಲು ಒತ್ತಾಯಿಸುತ್ತಿದ್ದು ಆ ಮೂಲಕ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬಹುಮತ ಸಾಬೀತನ್ನು ತೋರಿಸಬಹುದು ಎಂಬ ಲೆಕ್ಕಾಚಾರ ಗೆಹ್ಲೋಟ್ ಬಣದ್ದು. ಈಗಾಗಲೇ ಬಹುಮತ ಇದೆ ಎಂದಾದರೆ ಮತ್ತೆ ಅಧಿವೇಶನ ಏಕೆ ಕರೆಯುತ್ತೀರಿ ಎಂಬ ಪ್ರಶ್ನೆಯನ್ನು ನಿನ್ನೆ ರಾಜ್ಯಪಾಲರು ಮುಖ್ಯಮಂತ್ರಿಗಳ ಮುಂದಿಟ್ಟಿದ್ದರು.

ಈ ರೀತಿ ಆರು ಪ್ರಶ್ನೆಗಳನ್ನು ಸರ್ಕಾರಕ್ಕೆ ಮುಂದಿಟ್ಟು ರಾಜಭವನದಿಂದ ನಿನ್ನೆ ಸಂಸದೀಯ ವ್ಯವಹಾರಗಳ ಇಲಾಖೆಗೆ ಕಳುಹಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com