ಗುಜರಾತ್: ರಾಜ್ಯಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಇಬ್ಬರು ಕೈ ಶಾಸಕರ ರಾಜೀನಾಮೆ

ಜೂನ್ 19 ರ ರಾಜ್ಯಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಗುಜರಾತ್ ಕಾಂಗ್ರೆಸ್ ನಲ್ಲಿ ಬೇಗುದಿ ಪ್ರಾರಂಬವಾಗಿದೆ. ಚುನಾವಣೆಗೆ ಮುನ್ನ ಇಬ್ಬರು ಗುಜರಾತ್ ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. 

Published: 04th June 2020 01:52 PM  |   Last Updated: 04th June 2020 01:52 PM   |  A+A-


ಕಾಂಗ್ರೆಸ್

Posted By : Raghavendra Adiga
Source : PTI

ಅಹಮದಾಬಾದ್: ಜೂನ್ 19 ರ ರಾಜ್ಯಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಗುಜರಾತ್ ಕಾಂಗ್ರೆಸ್ ನಲ್ಲಿ ಬೇಗುದಿ ಪ್ರಾರಂಬವಾಗಿದೆ. ಚುನಾವಣೆಗೆ ಮುನ್ನ ಇಬ್ಬರು ಗುಜರಾತ್ ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. 

ಕಾಂಗ್ರೆಸ್ ಶಾಸಕರಾದ ಅಕ್ಷಯ್ ಪಟೇಲ್ ಮತ್ತು ಜಿತು ಚೌಧರಿ ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರನ್ನು ಭೇಟಿಯಾಗಿ  ರಾಜೀನಾಮೆ ಪತ್ರ ಹಸ್ತಾಂತರಿಸಿದ್ದಾರೆ.

"ನಾನು ಅವರ ರಾಜೀನಾಮೆ ಅಂಗೀಕರಿಸಿದ್ದೇನೆ. ಅವರೀಗ ಶಾಸಕರಾಗಿ ಮುಂದುವರಿದಿಲ್ಲ"ತ್ರಿವೇದಿ ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪಟೇಲ್ ವಡೋದರಾದ ಕರ್ಜನ್ ಸ್ಥಾನವನ್ನು ಪ್ರತಿನಿಧಿಸಿದರೆ, ಚೌಧರಿ ವಲ್ಸಾದ್‌ನ ಕಪ್ರದ ಸ್ಥಾನದಿಂದ ಗೆದ್ದಿದ್ದರು.

ಇನ್ನು ಇದಕ್ಕೂ ಮೊದಲು ಮಾರ್ಚ್‌ನಲ್ಲಿಯೂ ಕಾಂಗ್ರೆಸ್ಸಿನ ಐವರು ಶಾಸಕರು ರಾಜೀನಾಮೆ ನೀಡಿದ್ದರು. 182 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ 103 ಶಾಸಕರು ಮತ್ತು ವಿರೋಧ ಪಕ್ಷ ಕಾಂಂಗ್ರೆಸ್ ಪ್ರಸ್ತುತ 66 ಶಾಸಕರನ್ನು ಹೊಂದಿದೆ. ಗುಜರಾತಿನಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು  ಬಿಜೆಪಿಯಿಂದ ಮೂವರು ಮತ್ತು ಕಾಂಗ್ರೆಸ್ ನಿಂದ ಇಬ್ಬರು ಅಭ್ಯರ್ಥಿಗಳು  ಕಣದಲ್ಲಿದ್ದಾರೆ. 

ಅಭಯ್ ಭಾರದ್ವಾಜ್, ರಮಿಲಾ ಬಾರಾ ಮತ್ತು ನರ್ಹಾರಿ ಅಮೀನ್ ಅವರನ್ನು ಬಿಜೆಪಿ ಕಣಕ್ಕಿಳಿಸಿದರೆ, ಕಾಂಗ್ರೆಸ್ ಹಿರಿಯ ನಾಯಕರಾದ ಶಕ್ತಿಸಿಂಹ್  ಗೋಹಿಲ್ ಮತ್ತು ಭರತ್ ಸಿಂಹ್ ಸೋಲಂಕಿ ಅವರನ್ನು ಚುನಾವಣೆಗೆ ಕಣಕ್ಕಿಳಿಸಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp