ಲಾಕ್ ಡೌನ್ ಉಲ್ಲಂಘಿಸಿ ಹೊರಗೆ ಬಂದವರನ್ನು 14 ದಿನ ಕ್ವಾರಂಟೈನ್​ನಲ್ಲಿಡಿ: ರಾಜ್ಯಗಳಿಗೆ ಕೇಂದ್ರ ಖಡಕ್ ಸೂಚನೆ

ಪ್ರಧಾನಿ ನರೇಂದ್ರ ಮೋದಿ ಅವರು ಕೈಮುಗಿದು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇರುವಂತೆ ಮನವಿ ಮಾಡಿದರೂ ಕೇಳದೆ ಸುಖಾ ಸುಮ್ಮನೆ ಹೊರಗೆ ತಿರುಗುತ್ತಿರುವವರು ಇನ್ನು ಮುಂದೆ 14 ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ.

Published: 29th March 2020 03:21 PM  |   Last Updated: 29th March 2020 03:23 PM   |  A+A-


Modi

ನರೇಂದ್ರ ಮೋದಿ

Posted By : Vishwanath S
Source : Online Desk

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೈಮುಗಿದು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇರುವಂತೆ ಮನವಿ ಮಾಡಿದರೂ ಕೇಳದೆ ಸುಖಾ ಸುಮ್ಮನೆ ಹೊರಗೆ ತಿರುಗುತ್ತಿರುವವರು ಇನ್ನು ಮುಂದೆ 14 ಕ್ವಾರಂಟೈನ್​ನಲ್ಲಿರಬೇಕಾಗುತ್ತದೆ. 

ಕೊರೋನಾ ವೈರಸ್ ವಿರುದ್ಧದ ಲಾಕ್ ಡೌನ್ ಅನ್ನು ಕಟ್ಟುನಿಟ್ಟಾದಿ ಪಾಲಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ ನೀಡಿದೆ. ಇದೇ ವೇಳೆ ವಲಸಿಗ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳದಂತೆ ಗಡಿಯನ್ನು ಮುಚ್ಚಿ. ಮಾಲೀಕರು ಬಾಡಿಗೆ ಒತ್ತಾಯಿಸಬಾರದು. ಅದನ್ನು ಮೀರಿ ಒತ್ತಾಯಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದೆ.

ಕೆಲವರು ನಗರವಾಸಿಗಳು ಹಳ್ಳಿಗೆ ತೆರಳಲು ಮುಂದಾಗಿದ್ದು ಅವರನ್ನು ಅವರವರ ಮನೆಯಲ್ಲೇ ಉಳಿಯುವಂತೆ ನೋಡಿಕೊಳ್ಳಿ. ಕೊರೋನಾ ಮಹಾಮಾರಿಯನ್ನು ಹಳ್ಳಿಗಳಿಗೆ ಹರಡದಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಮಾನವಕುಲಕ್ಕೆ ಮಾರಕವಾಗಿರುವ ಕೊರೋನಾ ವೈರಸ್ ಭಾರತದಲ್ಲಿ ತನ್ನ ಮರಣ ಮೃದಂಗವನ್ನು ಮುಂದುವರೆಸಿದ್ದು, ವೈರಸ್'ಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಇದರಂತೆ ಈವರೆಗೂ ದೇಶದಲ್ಲಿ 26 ಮಂದಿ ಮೃತಪಟ್ಟಿದ್ದು ಸೋಂಕಿತರ ಸಂಖ್ಯೆ 987ಕ್ಕೆ ಏರಿಕೆಯಾಗಿದೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp