ಪಶ್ಚಿಮ ಬಂಗಾಳ ಸರ್ಕಾರದ 'ಕರ್ಮ ಭೂಮಿ' ಆ್ಯಪ್ ಮೂಲಕ ಉದ್ಯೋಗ ಪಡೆದ 8 ಸಾವಿರ ಐಟಿ ವೃತ್ತಿಪರರು

ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಇತರ ಸ್ಥಳಗಳಿಂದ ಪಶ್ಚಿಮ ಬಂಗಾಳಕ್ಕೆ ಮರಳಿದ ಸುಮಾರು 8000 ಐಟಿ ವೃತ್ತಿಪರರು ರಾಜ್ಯ ಸರ್ಕಾರದ 'ಕರ್ಮ ಭೂಮಿ' ಆ್ಯಪ್‌ ಮೂಲಕ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಕೋಲ್ಕತಾ: ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಇತರ ಸ್ಥಳಗಳಿಂದ ಪಶ್ಚಿಮ ಬಂಗಾಳಕ್ಕೆ ಮರಳಿದ ಸುಮಾರು 8000 ಐಟಿ ವೃತ್ತಿಪರರು ರಾಜ್ಯ ಸರ್ಕಾರದ 'ಕರ್ಮ ಭೂಮಿ' ಆ್ಯಪ್‌ ಮೂಲಕ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ, ವಿವಿಧ ಸ್ಥಳಗಳಿಂದ ರಾಜ್ಯಕ್ಕೆ ಮರಳಿದ ಐಟಿ ವೃತ್ತಿಪರರಿಗಾಗಿ 'ಕರ್ಮ ಭೂಮಿ' ಎಂಬ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

'ಕೊರೋನಾ ಕಾರಣದಿಂದ ಭಾರಿ ಪ್ರಮಾಣದ ಐಟಿ ವೃತ್ತಿಪರರು ಹೊರಗಿನಿಂದ ರಾಜ್ಯಕ್ಕೆ ಬಂದಿದ್ದರು' ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಜಂಟಿ ಕಾರ್ಯದರ್ಶಿ ಸಂಜಯ್ ದಾಸ್ ಅವರು ಹೇಳಿದ್ದಾರೆ.

'ಪ್ರತಿಭೆಗಳನ್ನು ಹೆಕ್ಕುವುದು ಕರ್ಮ ಭೂಮಿ ಆ್ಯಪ್‌ನ ಮೂಲ ಚಿಂತನೆ. ಕೋವಿಡ್‌ ಕಾರಣದಿಂದ ಸೃಷ್ಟಿಯಾದ ಸನ್ನಿವೇಶವು ಅದಕ್ಕೆ ಪೂರಕವಾಗಿತ್ತು,' ಎಂದು ವೆಬಿನಾರ್‌ವೊಂದರಲ್ಲಿ ದಾಸ್‌ ತಿಳಿಸಿದ್ದಾರೆ.

'ಈ ಅಪ್ಲಿಕೇಷನ್ ಉದ್ಯೋಗ ಒದಗಿಸುವ ವೇದಿಕೆಯೇನಲ್ಲ. ಆದರೆ ವೃತ್ತಿಪರರು ತಮ್ಮನ್ನು ನೋಂದಾಯಿಸಿಕೊಳ್ಳುವ ಮೂಲಕ ತಮ್ಮ ಕೌಶಲ ಪ್ರದರ್ಶನ ಮಾಡಿಕೊಳ್ಳಬಹುದು. ಸುಮಾರು 41,000 ವೃತ್ತಿಪರರು 400 ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಂಪರ್ಕಗೊಂಡಿದ್ದಾರೆ' ಎಂದು ದಾಸ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com