ಮುಂಬೈ: ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುವಂತೆ ಕಚ್ಚಾ ವಸ್ತುಗಳ ರಫ್ತಿಗೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ತೆಗೆದುಹಾಕಬೇಕಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಆದಾರ್ ಪೂನವಾಲಾ ಹೇಳಿದ್ದಾರೆ.
ಎಸ್‌ಐಐ ಪ್ರಸ್ತುತ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೊರೋನಾ ವಿರೋಧಿ ಲಸಿಕೆ ಕೋವಿಶೀಲ್ಡ್ ಅನ್ನು ಉತ್ಪಾದಿಸುತ್ತಿದೆ.
ಲಸಿಕೆಯನ್ನು ಭಾರತದಲ್ಲಿ ಬಳಸುವುದು ಮಾತ್ರವಲ್ಲದೆ ಹಲವಾರು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.
ಅಧಿಕಾರಶಾಹಿ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಅಡಚಣೆಗಳಿಂದಾಗಿ ಎಸ್‌ಐಐ ಅಗತ್ಯವಿರುವ ಸಂಖ್ಯೆಯ ಲಸಿಕೆಗಳನ್ನು ಕಳುಹಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಪೂನವಾಲಾ ಹಿಂದೊಮ್ಮೆ ಒಪ್ಪಿಕೊಂಡಿದ್ದರು.
ಯುಎಸ್ ಅಧ್ಯಕ್ಷರ ಟ್ವಿಟ್ಟರ್ ಹ್ಯಾಂಡಲ್ ಅನ್ನು ಟ್ಯಾಗ್ ಮಾಡಿ, ಪೂನವಾಲಾ "ಈ ವೈರಸ್ ಅನ್ನು ಸೋಲಿಸುವಲ್ಲಿ ನಾವು ನಿಜವಾಗಿಯೂ ಒಂದಾಗಬೇಕಾದರೆ, ಲಸಿಕೆ ಉತ್ಪಾದನೆಯು ಹೆಚ್ಚಾಗುವಂತೆ ಮಾಡಲು ಯುಎಸ್ ಕಚ್ಚಾ ವಸ್ತುಗಳ ರಫ್ತಿನ ಮೇಲಿನ ನಿರ್ಬಂಧವನ್ನು ತೆಗೆದುಹಾಕಬೇಕೆಂದು ಲಸಿಕೆ ಉದ್ಯಮದ ಪರವಾಗಿ, ನಾನು ನಿಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ರಫ್ತು ಯುಎಸ್ ನಿಂದ ನಿರ್ಬಂಧಿಸಲ್ಪಟ್ಟಿದೆ.ನಿಮ್ಮ ಅಧಿಕಾರಿಗಳ ಬಳಿ ಈ ಕುರಿತಂತೆ ವಿವರಗಳಿದೆ." ಎಂದು ಹೇಳಿದ್ದಾರೆ.
Advertisement