ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಲಾಕ್ ಡೌನ್ ಭೀತಿ: ವಲಸೆ ಕಾರ್ಮಿಕರು ದೆಹಲಿ ತೊರೆಯದಂತೆ ಮುಖ್ಯಮಂತ್ರಿ ಕೇಜ್ರಿವಾಲ್ ಮನವಿ

ವಲಸೆ ಕಾರ್ಮಿಕರು ಲಾಕ್ ಡೌನ್ ಭೀತಿಯಿಂದ ರಾಷ್ಟ್ರ ರಾಜಧಾನಿಯನ್ನು ತೊರೆದು, ತಮ್ಮ ಊರುಗಳಿಗೆ ಮರಳದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಎಲ್ಲಾ ರೀತಿಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. 

ನವದೆಹಲಿ: ವಲಸೆ ಕಾರ್ಮಿಕರು ಲಾಕ್ ಡೌನ್ ಭೀತಿಯಿಂದ ರಾಷ್ಟ್ರ ರಾಜಧಾನಿಯನ್ನು ತೊರೆದು, ತಮ್ಮ ಊರುಗಳಿಗೆ ಮರಳದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಎಲ್ಲಾ ರೀತಿಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ. 

ಕೈ ಮುಗಿದು ಮನವಿ ಮಾಡಿಕೊಳ್ಳುತ್ತೀನಿ, ದೆಹಲಿಯನ್ನು ತೊರೆಯಬೇಡಿ. ಇದು ಆರು ದಿನಗಳ ಸಣ್ಣ ಲಾಕ್ ಡೌನ್, ಈ ದಿನಗಳಲ್ಲಿ ನೀವು ಪ್ರಯಾಣ ಮಾಡುವುದರಲ್ಲಿ ವ್ಯರ್ಥ ಮಾಡುತ್ತೀರಾ, ಇಲ್ಲಿಯೇ ಇರಿ, ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಾಗಿದೆ. ನನ್ನ ಮೇಲೆ ನಂಬಿಕೆಯಿಡಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಬೇರೆ ಯಾವುದೇ ಆಯ್ಕೆಗಳಿಲ್ಲದೆ ಲಾಕ್ ಡೌನ್ ನಿರ್ಧಾರ ಕೈಗೊಳ್ಳಲಾಗಿದೆ. ಲಾಕ್ ಡೌನ್ ನಿಂದ ಜನರು ವಿಶೇಷವಾಗಿ ಬಡ ಜನರು ಅನುಭವಿಸುವ ಸಂಕಷ್ಟ ಅರಿವಿದೆ ಎಂದು ಹೇಳಿದ ಕೇಜ್ರಿವಾಲ್,  ಲಾಕ್ ಡೌನ್ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಹೆಚ್ಚಿನ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗುವುದು, ಆರು ದಿನಗಳಲ್ಲಿ ಹೆಚ್ಚಿನ ಹಾಸಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಕಳೆದ 24 ಗಂಟೆಗಳ ಅವಧಿಯಲ್ಲಿ 23,500 ಪ್ರಕರಣಗಳು ವರದಿಯಾಗಿವೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಸುಮಾರು 25 ಸಾವಿರ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರ ಹಾಗೂ ಸೋಂಕು ಪ್ರಮಾಣ ಕೂಡಾ ಹೆಚ್ಚಾಗಿದೆ. ಪ್ರತಿದಿನ 25 ಸಾವಿರ ರೋಗಿಗಳು ಬಂದರೆ, ವ್ಯವಸ್ಥೆ ಅದೋಗತ್ತಿಗೆ ಇಳಿಯಲಿದೆ. ಹಾಸಿಗೆಗಳ ಕೊರತೆ ಉಂಟಾಗಲಿದೆ ಎಂದರು.

ದೆಹಲಿ ಮಾರಕ ವೈರಸ್ ನ ನಾಲ್ಕನೇ ಅಲೆಯಲ್ಲಿ ಸಿಲುಕಿದ್ದು,  ಲೆಫ್ಟಿನೆಂಟ್ ಗೌರ್ನರ್ ಜೊತೆಗೆ ಚರ್ಚಿಸಿದ ನಂತರ ಇಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಆರು ದಿನಗಳ ಕಾಲ ಲಾಕ್ ಡೌನ್ ಜಾರಿಗೊಳಿಸಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.

Related Stories

No stories found.

Advertisement

X
Kannada Prabha
www.kannadaprabha.com