ಜ್ಞಾನಪೀಠ ಪ್ರಶಸ್ತಿ ವಿಜೇತ ಬಂಗಾಳಿ ಕವಿ ಶಂಖ ಘೋಶ್ ಕೋವಿಡ್ ನಿಂದ ನಿಧನ

ಖ್ಯಾತ ಬಂಗಾಳಿ ಕವಿ ಶಂಖ ಘೋಶ್ ಅವರು ಬುಧವಾರ ಬೆಳಿಗ್ಗೆ ಕೊರೋನಾದಿಂದ ನಿಧನರಾಗಿದ್ದಾರೆ. 89 ವರ್ಷದ ಘೋಷ್ ಅವರಿಗೆ ಏಪ್ರಿಲ್ 14ರಂದು ಕೋವಿಡ್ ದೃಢವಾಗಿತ್ತು. ವೈದ್ಯರ ಸಲಹೆಯ ಮೇರೆಗೆ ಅವರು ಮನೆಯಲ್ಲಿದ್ದರು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಶಂಖ ಘೋಶ್
ಶಂಖ ಘೋಶ್
Updated on

ಕೋಲ್ಕತ್ತಾ: ಖ್ಯಾತ ಬಂಗಾಳಿ ಕವಿ ಶಂಖ ಘೋಶ್ ಅವರು ಬುಧವಾರ ಬೆಳಿಗ್ಗೆ ಕೊರೋನಾದಿಂದ ನಿಧನರಾಗಿದ್ದಾರೆ. 89 ವರ್ಷದ ಘೋಷ್ ಅವರಿಗೆ ಏಪ್ರಿಲ್ 14ರಂದು ಕೋವಿಡ್ ದೃಢವಾಗಿತ್ತು. ವೈದ್ಯರ ಸಲಹೆಯ ಮೇರೆಗೆ ಅವರು ಮನೆಯಲ್ಲಿದ್ದರು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಇನ್ನು ಹಲವು ಬಗೆಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಘೋಷ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಕೆಲವು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.

ಘೋಷ್ ಫೆಬ್ರವರಿ 6, 1932 ರಂದು ಇಂದಿನ ಬಾಂಗ್ಲಾದೇಶದ ಚಾಂದ್ ಪುರ್ ನಲ್ಲಿ ಜನಿಸಿದ್ದರು. ರವೀಂದ್ರನಾಥ ಟ್ಯಾಗೋರ್ ಅವರ ಬಗ್ಗೆ ಅಧಿಕಾರಯುತವಾಗಿ ಮಾತಮಾಡಬಲ್ಲವರಾಗಿದ್ದ ಘೋಷ್ 'ಆದಿಮ್ ಲತಾ - ಗುಲ್ಮೋಮೇ' ಮತ್ತು 'ಮುರ್ಖಾ ಬರೋ ಸಮಾಜಿಕ್ ನಾಯ್' ಕೆಲವು ಪ್ರಸಿದ್ಧ ಕೃತಿಗಳಾಗಿದೆ. 

ವಿವಿಧ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಧ್ವನಿಯಾಗಿದ್ದ ಘೋಷ್ ಅವರಿಗೆ 2011 ರಲ್ಲಿ ಪದ್ಮಭೂಷಣ ಪ್ರಶಸ್ತಿ, 2016 ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಒಲಿದಿತ್ತು. ಅಲ್ಲದೆ ಅವರ 'ಬಾಬರರ್ ಪ್ರಥನ' ಪುಸ್ತಕಕ್ಕಾಗಿ 1977 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಅವರ ಕೃತಿಗಳನ್ನು ಇಂಗ್ಲಿಷ್ ಮತ್ತು ಹಿಂದಿ ಸೇರಿದಂತೆ ಹಲವಾರು ಭಾಷೆಗಳಿಗೆ ಅನುವಾದಿಸಲಾಗಿದೆ.

ಘೋಷ್ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com