ಕೇಂದ್ರಿಯ ಪಡೆಗಳು ಹಾರಿಸಿದ ಗುಂಡಿನಿಂದ ಇಬ್ಬರು ಕಾರ್ಯಕರ್ತರಿಗೆ ಗಾಯ: ಟಿಎಂಸಿ ಆರೋಪ ನಿರಾಕರಿಸಿದ ಆಯೋಗ
ಕೊಲ್ಕತ್ತಾ: ಉತ್ತರ 24 ಪರಗಣ ಜಿಲ್ಲೆಯ ಅಶೋಕ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರೀಯ ಪಡೆಗಳು ಹಾರಿಸಿದ ಗುಂಡಿನಿಂದ ತನ್ನ ಇಬ್ಬರು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂಬ ತೃಣಮೂಲ ಕಾಂಗ್ರೆಸ್ ಆರೋಪವನ್ನು ಚುನಾವಣಾ ಆಯೋಗ ತಳ್ಳಿ ಹಾಕಿರುವುದಾಗಿ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಬಾಂಬ್ ಸಿಡಿಸಲಾಗಿದೆ. ಕೇಂದ್ರಿಯ ಪೊಲೀಸರಿದ್ದ ವಾಹನವನ್ನೊಂದನ್ನು ಅಪರಿಚಿತರು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೇಂದ್ರಿಯ ಪಡೆ ಸಿಬ್ಬಂದಿ ಲಾಠಿಗಳಿಂದ ಹೊಡೆದು ಗುಂಡಿನ ದಾಳಿ ನಡೆಸಿದ ನಂತರ ಪಕ್ಷದ ಇಬ್ಬರು ಸಹೋದ್ಯೋಗಿಗಳು ಗಾಯಗೊಂಡಿದ್ದಾರೆ. ಸಮೀಪದಲ್ಲಿದ್ದ ಆಸ್ಪತ್ರೆಯೊಂದರಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇಂದ್ರಿಯ ಪಡೆಗಳಿಗೆ ಇದು ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಟಿಎಂಸಿ ಅಭ್ಯರ್ಥ ನಾರಾಯಣ ಗೊಸ್ವಾಮಿ ಆರೋಪಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಗೆ ನಿಯೋಜಿತರಾದ ಅಧಿಕಾರಿಗಳಿಂದ ವರದಿಯೊಂದನ್ನು ಚುನಾವಣಾ ಆಯೋಗದ ಅಧಿಕಾರಿಗಳು ಪಡೆದಿದ್ದಾರೆ. ಈ ವರದಿ ಆಧಾರದ ಮೇಲೆ ಆರೋಪವನ್ನು ನಿರಾಕರಿಸಿದ್ದಾರೆ.
ಕೇಂದ್ರಿಯ ಪಡೆಗಳಿಂದ ಗುಂಡು ಹಾರಿಸಿರುವಂತಹ ಯಾವುದೇ ಘಟನೆ ನಡೆದಿಲ್ಲ. ಅಂತಹ ವರದಿ ಇಲ್ಲ. ಇದು ಆಧಾರ ರಹಿತ ಆರೋಪ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಕೊಚ್ ಬೆಹಾರ್ ಜಿಲ್ಲೆಯಲ್ಲಿ ಏಪ್ರಿಲ್ 10 ರಂದು ನಡೆದ ನಾಲ್ಕನೇ ಹಂತದ ಚುನಾವಣೆ ವೇಲೆಯಲ್ಲಿ ಸಿಐಎಸ್ ಎಫ್ ಸಿಬ್ಬಂದಿ ಸ್ವರಕ್ಷಣೆಗಾಗಿ ನಡೆಸಿದ ಗುಂಡಿನ ದಾಳಿಯಿಂದ ನಾಲ್ವರು ಮೃತಪಟ್ಟಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ