ಅಡ್ವಾನ್ಸ್ ಫಂಡಿಂಗ್ ಆಧಾರದ ಮೇಲೆ ಆರಂಭಿಕ ದರ ನಿಗದಿ: ಕೋವಿಡ್ ಲಸಿಕೆ ಬೆಲೆ ಕುರಿತು ಸೀರಮ್ ಇನ್ಸ್ಟಿಟ್ಯೂಟ್ ಸಮರ್ಥನೆ

ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಳಸುತ್ತಿರುವ ಕೋವಿಡ್-19 ಲಸಿಕೆಯನ್ನು ತಯಾರಿಸುತ್ತಿರುವ ಸೀರಮ್ ಇನ್ಸ್ಟಿಟ್ಯೂಟ್ ಶನಿವಾರ ಕೋವಿಶೀಲ್ಡ್ ಲಸಿಕೆಯನ್ನು ಆರಂಭಿಕ ದರಕ್ಕಿಂತ 1.5 ಪಟ್ಟು ಹೆಚ್ಚಿಸಿರುವುದನ್ನು ಸಮರ್ಥಿಸಿಕೊಂಡಿದೆ.
ಕೋವಿಶೀಲ್ಡ್ ಇಂಜೆಕ್ಷನ್
ಕೋವಿಶೀಲ್ಡ್ ಇಂಜೆಕ್ಷನ್
Updated on

ನವದೆಹಲಿ: ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬಳಸುತ್ತಿರುವ ಕೋವಿಡ್-19 ಲಸಿಕೆಯನ್ನು ತಯಾರಿಸುತ್ತಿರುವ ಸೀರಮ್ ಇನ್ಸ್ಟಿಟ್ಯೂಟ್ ಶನಿವಾರ ಕೋವಿಶೀಲ್ಡ್ ಲಸಿಕೆಯನ್ನು ಆರಂಭಿಕ ದರಕ್ಕಿಂತ 1.5 ಪಟ್ಟು ಹೆಚ್ಚಿಸಿರುವುದನ್ನು ಸಮರ್ಥಿಸಿಕೊಂಡಿದೆ. ಮುಂಚಿನ ಬೆಲೆ ಅಡ್ವಾನ್ಸ್ ಫಂಡಿಂಗ್ ಹಣವನ್ನು ಆಧರಿಸಿದ್ದಾಗಿದೆ ಮತ್ತು ಈಗ ಅದರ ಪ್ರಮಾಣ ಹೆಚ್ಚಳ ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಹೂಡಿಕೆ ಮಾಡಬೇಕಾಗಿದೆ ಎಂದು ಹೇಳಿದೆ.

ಸೀರಮ್ ಇನ್ಸ್ಟಿಟ್ಯೂಟ್  ಆಫ್ ಇಂಡಿಯಾ, ಪುಣೆಯಲ್ಲಿ ಅಸ್ಟ್ರಾಜೆನೆಕಾದ ಲಸಿಕೆ ಕೋವಿಶೀಲ್ಡ್ ನ್ನು ತಯಾರಿಸುತ್ತದೆ. ಈ ವಾರದ ಆರಂಭದಲ್ಲಿ ಪ್ರತಿ ಡೋಸ್ ಬೆಲೆ 600 ರೂ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಯಾವುದೇ ಹೊಸ ಒಪ್ಪಂದಗಳಿಗೆ 400 ರೂ. ಎಂದು ಘೋಷಿಸಿತ್ತು. 

ಸದ್ಯ, ಪೂರೈಕೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್ 150 ರೂ.ಚಾರ್ಜ್ ವಿಧಿಸುವುದರ ಹೋಲಿಕೆ ಕುರಿತು ಕಂಪನಿಯು, ಭಾರತದೊಂದಿಗೆ ಜಾಗತಿಕ ಮಟ್ಟದ ಲಸಿಕೆ ದರವನ್ನು ಸರಿಯಾಗಿ ಹೋಲಿಸಲಾಗಿ ಎಂದು ಹೇಳಿದೆ. ಕೋವಿಶೀಲ್ಡ್  ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಒಳ್ಳೆಯ ಕೋವಿಡ್ -19 ಲಸಿಕೆಯಾಗಿದೆ.

ಲಸಿಕೆ ತಯಾರಿಕೆಗಾಗಿ ಮುಂಗಡವಾಗಿ ಹಣ ಪಡೆದಿದ್ದ ದೇಶಗಳಿಗಾಗಿ ಆರಂಭಿಕವಾಗಿ ಜಾಗತಿಕವಾಗಿ ಬೆಲೆ ಕಡಿಮೆ ಇತ್ತು. ಆರಂಭದಲ್ಲಿ ಭಾರತ ಸೇರಿದಂತೆ ಎಲ್ಲಾ ಕೋವಿಡ್-19 ಭಾದಿತ ರಾಷ್ಟ್ರಗಳಿಗೆ ಕಡಿಮೆ ಬೆಲೆಯಲ್ಲಿಯೇ ಲಸಿಕೆಯನ್ನು ಪೂರೈಸಲಾಗಿದೆ ಎಂದು ಕಂಪನಿ ಹೇಳಿದೆ.

ಆರಂಭಿಕ ಬೆಲೆಯನ್ನು ಜಾಗತಿಕವಾಗಿ ಕಡಿಮೆ ಇಡಲಾಗಿದೆ ಏಕೆಂದರೆ, ಇದು ಅಪಾಯಕಾರಿ ಲಸಿಕೆ ತಯಾರಿಕೆಗಾಗಿ ಆ ದೇಶಗಳು ನೀಡಿದ ಅಡ್ವಾನ್ಸ್ ಫಂಡಿಂಗ್ ಅವನ್ನು ಆಧರಿಸಿದೆ.

ಪ್ರಸ್ತುತ ಪರಿಸ್ಥಿತಿ ಭಯಾನಕವಾಗಿದೆ. ಸೋಂಕು ನಿರಂತರವಾಗಿ ಹರಡುತ್ತಿದ್ದು, ಸಾರ್ವಜನಿಕರು ತೊಂದರೆಯಲ್ಲಿದ್ದಾರೆ. ಲಸಿಕೆ ಹೆಚ್ಚಳ ಹಾಗೂ ಕೋವಿಡ್-ವಿರುದ್ಧದ ಹೋರಾಟದಲ್ಲಿ ನಮ್ಮ ಸಾಮರ್ಥ್ಯವನ್ನು ವಿಸ್ತರಿಸಬೇಕಾಗಿದೆ. ಅಲ್ಲದೇ ಜೀವಗಳನ್ನು ಕಾಪಾಡಬೇಕಾಗಿದೆ ಎಂದು ಕಂಪನಿ ತಿಳಿಸಿದೆ.

ಸೀಮಿತ ಪ್ರಮಾಣದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಗೆ 600 ರೂ.ನಂತೆ ಮಾರಾಟ ಮಾಡುತ್ತೇವೆ. ಇತರ ವೈದ್ಯಕೀಯ ಚಿಕಿತ್ಸೆಗಿಂತ ಕೋವಿಶೀಲ್ಡ್ ಲಸಿಕೆ ಬೆಲೆ ಈಗಲೂ ಕಡಿಮೆ ಇದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com