ಮಗಳ ಮದುವೆಗೆ ಇಟ್ಟಿದ್ದ 2 ಲಕ್ಷ ರೂ. ಅನ್ನು ಆಮ್ಲಜನಕ ಖರೀದಿಸಲು ದೇಣಿಗೆ ನೀಡಿದ ರೈತ

ಕೋವಿಡ್ -19 ರೋಗಿಗಳ ಅವಸ್ಥೆ ಮತ್ತು ವೈದ್ಯಕೀಯ ಆಮ್ಲಜನಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರೈತ ತನ್ನ ಮಗಳ ಮದುವೆಗಾಗಿ ಕೂಡಿಟ್ಟಿದ್ದ 2 ಲಕ್ಷ ರುಪಾಯಿಯನ್ನು ಸ್ಥಳೀಯ ಆಡಳಿತಕ್ಕೆ ದೇಣಿಗೆ ನೀಡಿದ್ದಾರೆ. 
ಆಮ್ಲಜನಕ
ಆಮ್ಲಜನಕ
Updated on

ನೀಮುಚ್(ಮಧ್ಯಪ್ರದೇಶ): ಕೋವಿಡ್ -19 ರೋಗಿಗಳ ಅವಸ್ಥೆ ಮತ್ತು ವೈದ್ಯಕೀಯ ಆಮ್ಲಜನಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರೈತ ತನ್ನ ಮಗಳ ಮದುವೆಗಾಗಿ ಕೂಡಿಟ್ಟಿದ್ದ 2 ಲಕ್ಷ ರುಪಾಯಿಯನ್ನು ಸ್ಥಳೀಯ ಆಡಳಿತಕ್ಕೆ ದೇಣಿಗೆ ನೀಡಿದ್ದಾರೆ. 

ಗ್ವಾಲ್ ದೇವಿಯಾನ್ ಗ್ರಾಮದ ಚಂಪಾಲಾಲ್ ಗುರ್ಜರ್ ಅವರು ಎರಡು ಲಕ್ಷ ರೂ.ಗಳ ಚೆಕ್ ಅನ್ನು ಜಿಲ್ಲಾಧಿಕಾರಿ ಮಾಯಾಂಕ್ ಅಗ್ರವಾಲ್ ಅವರಿಗೆ ನೀಡಿದ್ದಾರೆ. 

ಕೃಷಿಯನ್ನು ನಂಬಿಕೊಂಡಿರುವ ಗುರ್ಜರ್ ಅವರು ತಮ್ಮ ಮಗಳು ಅನಿತಾಳನ್ನು ಬಹಳ ಕಾಳಜಿಯಿಂದ ಬೆಳೆಸಿದರು. ನಿನ್ನೆ ಮಗಳ ಮದುವೆ ಮಾಡಿದ್ದು ಅದ್ಧೂರಿ ಮದುವೆಗೆ ಬ್ರೇಕ್ ಹಾಕಿದ್ದಾರೆ. ಸಾಂಕ್ರಾಮಿಕ ಪರಿಸ್ಥಿತಿಯು ಗುರ್ಜರ್ ಅವರ ಮನಸ್ಸನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸುವಂತೆ ಮಾಡಿತು.

ಆದ್ದರಿಂದ ನನ್ನ ಮಗಳ ಮದುವೆಯನ್ನು ಸ್ಮರಣೀಯವಾಗಿಸಲು ನಾನು ಎರಡು ಲಕ್ಷವನ್ನು ಜಿಲ್ಲಾಡಳಿತಕ್ಕೆ ದೇಣಿಗೆ ನೀಡಿದ್ದೇನೆ ಇದರಿಂದ ಅವರು ಎರಡು ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಬಹುದು ಎಂದು ಅವರು ಹೇಳಿದರು. 

ತನ್ನ ತಂದೆಯ ಉದಾತ್ತ ಕಾರ್ಯವು ತನ್ನನ್ನು ಸಂತೋಷದಲ್ಲಿ ಮುಳುಗಿಸಿದೆ. "ಇದೀಗ, ಕೋವಿಡ್ 19 ಪ್ರಕರಣಗಳ ಹೆಚ್ಚಳದಿಂದಾಗಿ ವೈದ್ಯಕೀಯ ಆಮ್ಲಜನಕದ ಅವಶ್ಯಕತೆಯಿದೆ ಜಾಸ್ತಿ ಇದೆ ಎಂದು ಅನಿತಾ ಹೇಳಿದರು.

ಕಲೆಕ್ಟರ್ ಅಗ್ರವಾಲ್ ಗುರ್ಜರ್ ಅವರ ಕಾರ್ಯವನ್ನು ಶ್ಲಾಘಿಸಿದರು. 'ಇತರ ರೈತರು ಇಂತಹ ಉದಾತ್ತ ಕಾರ್ಯವನ್ನು ಪರಿಗಣನೆಗೆ ತೆಗೆದುಕೊಂಡು ದಾನ ಮಾಡಿದರೆ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವು ತುಂಬಾ ಸುಲಭವಾಗುತ್ತದೆ ಎಂದು  ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com