ಮರ್ಸಿಡಿಸ್ ಬೋಟ್
ಮರ್ಸಿಡಿಸ್ ಬೋಟ್

ಕಾಣೆಯಾಗಿದ್ದ ಮೀನುಗಾರಿಕೆ ದೋಣಿ 'ಮರ್ಸಿಡಿಸ್' ಕೊನೆಗೂ ಪತ್ತೆ, ಸಿಬ್ಬಂದಿ ಸುರಕ್ಷಿತ

ಸತತ ನಾಲ್ಕು ದಿನಗಳ ಶೋಧ ಕಾರ್ಯಾಚರಣೆಯ ನಂತರ ನಾಪತ್ತೆಯಾಗಿದ್ದ 'ಮರ್ಸಿಡಿಸ್' ಎಂಬ ಆಳ ಸಮುದ್ರದ ಮೀನುಗಾರಿಕಾ ದೋಣಿ ಕೊನೆಗೂ ಬುಧವಾರ ಪತ್ತೆಯಾಗಿದ್ದು, 11 ಮೀನುಗಾರರು ಸಹ ಸುರಕ್ಷಿತವಾಗಿದ್ದಾರೆ.

ನವದೆಹಲಿ: ಸತತ ನಾಲ್ಕು ದಿನಗಳ ಶೋಧ ಕಾರ್ಯಾಚರಣೆಯ ನಂತರ ನಾಪತ್ತೆಯಾಗಿದ್ದ 'ಮರ್ಸಿಡಿಸ್' ಎಂಬ ಆಳ ಸಮುದ್ರದ ಮೀನುಗಾರಿಕಾ ದೋಣಿ ಕೊನೆಗೂ ಬುಧವಾರ ಪತ್ತೆಯಾಗಿದ್ದು, 11 ಮೀನುಗಾರರು ಸಹ ಸುರಕ್ಷಿತವಾಗಿದ್ದಾರೆ.

ಮೀನುಗಾರಿಕಾ ದೋಣಿ ಎಪ್ರಿಲ್ 6 ರಂದು ತಮಿಳುನಾಡಿನ ತೆಂಗಪಟ್ಟಣಂ ಮೀನುಗಾರಿಕೆ ಬಂದರಿನಿಂದ 30 ದಿನಗಳ ಕಾಲ ಮೀನುಗಾರಿಕೆಗಾಗಿ ಕೇರಳದ ಪಶ್ಚಿಮಕ್ಕೆ 11 ಸಿಬ್ಬಂದಿಗಳೊಂದಿಗೆ ಹೊರಟಿತ್ತು. ಆದರೆ ಮೀನುಗಾರಿಕಾ ದೋಣಿ ಮರ್ಸಿಡಿಸ್ ಸಮುದ್ರದಲ್ಲಿ ಮುಳುಗಿದೆ ಎಂದು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಮೀನುಗಾರರು ಭಾವಿಸಿದ್ದರು. 

ದೋಣಿ ನಾಪತ್ತೆಯಾಗಿರುವ ಬಗ್ಗೆ ತಮಿಳುನಾಡು ಮೀನುಗಾರಿಕೆ ಅಧಿಕಾರಿಗಳು ಏಪ್ರಿಲ್ 24 ರಂದು ಮಾಹಿತಿ ನೀಡಲಾಗಿತ್ತು. ಅಂದೇ ಕೋಸ್ಟ್ ಗಾರ್ಡ್ ಶೋಧ ಕಾರ್ಯಾಚರಣೆ ಆರಂಭಿಸಿತ್ತು.

ಮುಂಬೈನ ಇಂಡಿಯನ್ ಕೋಸ್ಟ್ ಗಾರ್ಡ್‌ ಮ್ಯಾರಿಟೈಮ್ ರಕ್ಷಣಾ ಸಮನ್ವಯ ಕೇಂದ್ರ(ಎಂಆರ್‌ಸಿಸಿ) ಅಂತರರಾಷ್ಟ್ರೀಯ ಸುರಕ್ಷತಾ ಜಾಲವನ್ನು ಸಕ್ರಿಯಗೊಳಿಸಿ, ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು.

ಮುಖ್ಯ ಭೂಭಾಗ ಮತ್ತು ಹವಾಮಾನದ ಸವಾಲುಗಳ ನಡುವೆ ನಾಲ್ಕು ದಿನಗಳ ನಿರಂತರ ಹುಡುಕಾಟದ ನಂತರ, ಕಾಣೆಯಾದ ದೋಣಿ ಲಕ್ಷದ್ವೀಪ ದ್ವೀಪಗಳಿಂದ 370 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.

"ಐಸಿಜಿ ಡಾರ್ನಿಯರ್ ಇಂದು ಬೆಳಗ್ಗೆ ಮೀನುಗಾರಿಕಾ ದೋಣಿ ಪತ್ತೆಯಾಗಿರುವುದನ್ನು ಖಚಿತಪಡಿಸಿದೆ. ಎಂಆರ್‌ಸಿಸಿ(ಮುಂಬೈ) ಮೀನುಗಾರಿಕಾ ದೋಣಿಯೊಂದಿಗೆ ದೋಣಿ ಹೊಂದಿರುವ ಉಪಗ್ರಹ ಫೋನ್‌ನಲ್ಲಿ ಸಂವಹನ ನಡೆಸಲಾಗಿದ್ದು, ಸಿಬ್ಬಂದಿ ಸುರಕ್ಷಿತವಾಗಿರುವುದನ್ನು ಸಹ ಖಚಿತಪಡಿಸಿದೆ" ಕೋಸ್ಟ್ ಗಾರ್ಡ್ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com