ಭವಿಷ್ಯದಲ್ಲಿ 'ಖೇಲಾ ಹೋಬೆ' ಗೆ ಇಡೀ ದೇಶವೇ ಸಾಕ್ಷಿಯಾಗಲಿದೆ- ಮಮತಾ ಬ್ಯಾನರ್ಜಿ

ಜನರಲ್ಲಿ ಜನಪ್ರಿಯವಾಗಿರುವ ತೃಣಮೂಲ ಕಾಂಗ್ರೆಸ್ ಚುನಾವಣೆಯ ಘೋಷಣೆ 'ಖೇಲಾ ಹೋಬೆ' ಮುಂದಿನ ದಿನಗಳಲ್ಲಿ ಇಡೀ ದೇಶವೇ ಸಾಕ್ಷಿಯಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Updated on

ಕೊಲ್ಕತ್ತಾ: ಜನರಲ್ಲಿ ಜನಪ್ರಿಯವಾಗಿರುವ ತೃಣಮೂಲ ಕಾಂಗ್ರೆಸ್ ಚುನಾವಣೆಯ ಘೋಷಣೆ 'ಖೇಲಾ ಹೋಬೆಗೆ' ಮುಂದಿನ ದಿನಗಳಲ್ಲಿ ಇಡೀ ದೇಶವೇ ಸಾಕ್ಷಿಯಾಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ಈ ಮೂಲಕ 2024ರ ಲೋಕಸಭಾ ಚುನಾವಣೆಯ ಸುಳಿವು ನೀಡಿದ್ದಾರೆ. ಭಾರತಕ್ಕೆ ದಾರಿ ತೋರಿಸುವಲ್ಲಿ ಬಂಗಾಳ ಹೆಮ್ಮೆ ಪಡುತ್ತದೆ ಎಂದು ಟಿಎಂಸಿ ವರಿಷ್ಠರು ಹೇಳಿದ್ದಾರೆ.

 ಖೇಲಾ ಹೋಬೆ ಯೋಜನೆ ಉದ್ಘಾಟನೆ ನಂತರ ಮಾತನಾಡಿದ ಅವರು'ನೀವು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು ಆದರೆ, ಈ ಘೋಷಣೆ ದೇಶದ ಜನರಲ್ಲಿ ಜನಪ್ರಿಯವಾಗಿದೆ ಎಂಬುದು ನಿಜವಾಗಿದೆ. ಸಂಸತ್ ಮತ್ತು ಉತ್ತರ ಪ್ರದೇಶ, ರಾಜಸ್ಥಾನದಂತಹ ಅನೇಕ ರಾಜ್ಯಗಳಲ್ಲಿ ಈ ಘೋಷಣೆ ಹೆಚ್ಚಾಗಿದೆ ಎಂದು ಹೇಳಿದರು ಈವರೆಗೂ ಚಿಕ್ಕದಾಗಿ ಆಟ ಆಡಲಾಗಿದೆ. ಇನ್ನೂ ಮುಂದೆ ದೊಡ್ಡದಾಗಿ ಆಡುವುದಾಗಿ ಹೇಳಿದರು.

ಈ ಪಂದ್ಯದಲ್ಲಿ ಜನರಿಗೆ ದಾರಿ ತೋರಿಸುವಲ್ಲಿ ಬಂಗಾಳ ಹೆಮ್ಮೆ ಪಡಬಹುದು. ನೆನಪಿಡಿ, ಮುಂದಿನ ದಿನಗಳಲ್ಲಿ ಇಡೀ ದೇಶವೇ ಒಂದು ಆಟಕ್ಕೆ ಸಾಕ್ಷಿಯಾಗಲಿದೆ. ಖೇಲಾ (ಆಟ) ಇಲ್ಲದೆ ಯಾವುದೇ ಜೀವನ ಇರಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು. 1980 ರಲ್ಲಿ ನಗರದಲ್ಲಿ ನಡೆದ ಡರ್ಬಿ ಪಂದ್ಯದ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ 16 ಫುಟ್ಬಾಲ್ ಅಭಿಮಾನಿಗಳ ಸಾವಿನ ಸ್ಮರಣಾರ್ಥ ಮಮತಾ ಬ್ಯಾನರ್ಜಿ ಸರ್ಕಾರ ಆಗಸ್ಟ್ 16 ರಂದು 'ಖೇಲ್ ಹುಬೇ ದಿವಸ್' ಆಚರಿಸಲು ನಿರ್ಧರಿಸಿದೆ.
        
ಭಾರತೀಯ ಫುಟ್‌ಬಾಲ್ ಅಸೋಸಿಯೇಶನ್‌ಗೆ ಸಂಯೋಜಿತವಾಗಿರುವ 303 ಕ್ಲಬ್‌ಗಳಿಗೆ ತಲಾ 10 ಫುಟ್‌ಬಾಲ್‌ಗಳನ್ನು ವಿತರಿಸಿದ ಅವರು, ಗ್ರಾಮೀಣ ಪ್ರದೇಶದ ಆಟಗಾರರು ಮತ್ತು ತರಬೇತುದಾರರಿಗೆ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ನೀಡಲಾಗುವುದು ಎಂದು ಹೇಳಿದರು.

 ರಾಜ್ಯ ಸರ್ಕಾರ ರಾಜ್ಯದ ಕನಿಷ್ಠ 25,000 ಕ್ಲಬ್‌ಗಳಿಗೆ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಿದೆ ಎಂದು ಹೇಳಿದ ಬ್ಯಾನರ್ಜಿ, 'ಖೇಲಾ ಹೋಬೆ ದಿವಸ್ ಸಂದರ್ಭದಲ್ಲಿ ಆಯೋಜಿಸಲಾದ ಪಂದ್ಯಗಳಲ್ಲಿ ಭಾಗವಹಿಸುವವರಿಗೆ ಹೆಚ್ಚುವರಿ 15,000 ರೂಪಾಯಿಗಳನ್ನು ನೀಡಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com