ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ, ಗರ್ಭಿಣಿ ಮಾಡಿದ ವೃದ್ಧನ ಬಂಧನ!

ಅಜ್ಜ ಎಂದರೆ ಮೊಮ್ಮಕ್ಕಳಿಗೆ ವಾತ್ಸಲ್ಯ-ವಿಶ್ವಾಸ ಅತೀವವಾಗಿರುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ 15 ವರ್ಷದ ತನ್ನ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ. 
ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿ (ಸಾಂದರ್ಭಿಕ ಚಿತ್ರ)
ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿ (ಸಾಂದರ್ಭಿಕ ಚಿತ್ರ)
Updated on

ಕಲ್ಲಕ್ಕುರಿಚಿ: ಅಜ್ಜ ಎಂದರೆ ಮೊಮ್ಮಕ್ಕಳಿಗೆ ವಾತ್ಸಲ್ಯ-ವಿಶ್ವಾಸವಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ 15 ವರ್ಷದ ತನ್ನ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ. 

ಈ ಕೃತ್ಯ ಎಸಗಿದ 70 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ಕಲ್ಲಕ್ಕುರಿಚಿಯಲ್ಲಿ ನಡೆದಿದೆ. 

ಈ ಹೀನ ಕೃತ್ಯ ಎಸಗಲು ವೃದ್ಧನಿಗೆ ಸಹಕರಿಸಿದ ಓರ್ವ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದು ಮತ್ತೋರ್ವ ಆರೋಪಿಯ ಬಂಧನಕ್ಕಾಗಿ ಶೋಧಕಾರ್ಯಾಚರಣೆ ಮುಂದುವರೆಸಿದ್ದಾರೆ. ಮೂವರ ವಿರುದ್ಧವೂ ಪೋಸ್ಕೋ (POCSO) ಕಾಯ್ದೆಯಡಿ ಬಂಧಿಸಲಾಗಿದೆ. 

10 ವರ್ಷಗಳ ಹಿಂದೆ ತಾಯಿ ಮೃತಪಟ್ಟು ತಂದೆ ಬಿಟ್ಟು ಹೋದ ನಂತರ ನೀಲಾ(15) ತನ್ನ ಸಹೋದರ ಹಾಗೂ ಅಜ್ಜನ ಜೊತೆ ತಿರುಕೊಯಿಲೂರ್ ನ ಸೆಲ್ಲಂಗ್ ಕುಪ್ಪಂ ನಲ್ಲಿ ವಾಸವಾಗಿದ್ದರು. 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿ ಮಗು ಸಾವನ್ನಪ್ಪಿದ್ದರ ಬಗ್ಗೆ ಗ್ರಾಮ ಆಡಳಿತಾಧಿಕಾರಿ ವಿಮಲ್ ಗೆ ಮಾಹಿತಿ ತಲುಪಿತ್ತು. ಮಗುವಿನ ಶವವನ್ನು ಬಾಲಕಿಯ ಅಜ್ಜ ಹಾಗೂ ಸಂಬಂಧಿ ನದಿಗೆ ಎಸೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. 

ವಿಎಒ ಈ ಸಂಬಂಧ ತಿರುಕೊಯಿಲೂರ್ ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 3 ವರ್ಷಗಳಿಂದ ಬಾಲಕಿಯ ಮೇಲೆ ಈ ವೃದ್ಧ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಈ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದುಬಂದಿದೆ. 

ಈ ಬಾಲಕಿ ಗರ್ಭಿಣಿಯಾದಾಗ ಲಾಕ್ ಡೌನ್ ಇದ್ದ ಪರಿಣಾಮ ಯಾರೂ ಇದನ್ನು ಗಮನಿಸಿರಲಿಲ್ಲ. ಜು.30 ರಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸಂಬಂಧಿಕರಾಗಿದ್ದ ಮಹಿಳೆಯೊಬ್ಬರು ಬಾಲಕಿಯನ್ನು ನರ್ಸ್ ಬಳಿ ಕರೆದೊಯ್ದಿದ್ದಾರೆ. ನವಜಾತ ಶಿಶು ಸ್ವಾಭಾವಿಕವಾಗಿ ಸಾವನ್ನಪ್ಪಿದೆಯೇ ಅಥವಾ ಹತ್ಯೆ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಗುವಿಗೆ ಜನ್ಮ ನೀಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com