ಕೃಷಿ ಕಾನೂನು ರದ್ದುಗೊಳಿಸದ ಕೇಂದ್ರ ಸರ್ಕಾರದ ವಿರುದ್ಧ ಕಿಸಾನ್ ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯ ಅಂಗೀಕಾರ

ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾನಿರತ ರೈತರಿಂದ ನಡೆದ ಕಿಸಾನ್ ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯವೊಂದನ್ನು ಶುಕ್ರವಾರ ಅಂಗೀಕರಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ಕಿಸಾನ್ ಸಂಸತ್ ನಲ್ಲಿ ಪಾಲ್ಗೊಂಡಿದ್ದ ರೈತರು
ಕಿಸಾನ್ ಸಂಸತ್ ನಲ್ಲಿ ಪಾಲ್ಗೊಂಡಿದ್ದ ರೈತರು

ನವದೆಹಲಿ: ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾನಿರತ ರೈತರಿಂದ ನಡೆದ ಕಿಸಾನ್ ಸಂಸತ್ ನಲ್ಲಿ ಅವಿಶ್ವಾಸ ನಿರ್ಣಯವೊಂದನ್ನು ಶುಕ್ರವಾರ ಅಂಗೀಕರಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

ನೈಸರ್ಗಿಕ ವಿಪತ್ತುಗಳು, ತೈಲ ಬೆಲೆ ಏರಿಕೆ ಅವಧಿಯಲ್ಲಿ ಸರ್ಕಾರ ರೈತರಿಗೆ ಬೆಂಬಲಕ್ಕೆ ನಿಲ್ಲುವಲ್ಲಿ ವಿಫಲವಾಗಿದೆ ಎಂದು ಹೇಳಿರುವ 40 ರೈತರ ಯೂನಿಯನ್ ಗಳ ಒಕ್ಕೂಟ, ಶುಕ್ರವಾರ ನಡೆದ ಕಿಸಾನ್ ಸಂಸತ್ ನಲ್ಲಿ ಪೆಗಾಸಸ್ ಹಗರಣ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದೆ. 

 ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ. ಸರ್ಕಾರದ ಹಲವು ರೈತ ವಿರೋಧಿ ಕ್ರಮಗಳ ಜೊತೆಗೆ ದೇಶದಾದ್ಯಂತ ಲಕ್ಷಗಟ್ಟಲೆ ರೈತರು ನಡೆಸಿದ ಎಂಟು ತಿಂಗಳ ಶಾಂತಿಯುತ ಪ್ರತಿಭಟನೆಗಳ ಹೊರತಾಗಿಯೂ ರೈತರ ಬೇಡಿಕೆಗಳನ್ನು ಈಡೇರಿಸಲಾಗಲಿಲ್ಲ ಎಂಬ ಅಂಶವನ್ನು ಇದು ಆಧರಿಸಿದೆ.

ನರೇಂದ್ರ ಮೋದಿ ಕಾರ್ಪೋರೇಟ್ ಪರ, ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ.  ರೈತರ ಬೇಡಿಕೆಯಾದ ಕೃಷಿ ಕಾನೂನುಗಳ ರದ್ದತಿ, ಮತ್ತು ಎಲ್ಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೊಳಿಸುತ್ತಿಲ್ಲ . ಇದನ್ನು ನಿರ್ಣಯದಲ್ಲಿ ಒತ್ತಿ ಹೇಳಲಾಗಿದೆ ಎಂದು ಎಸ್ ಕೆ ಎಂ ತಿಳಿಸಿದೆ. 

ಕಿಸಾನ್ ಸಂಸದರು ತಮ್ಮ ಜೀವನೋಪಾಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಉಲ್ಲಂಘನೆ ಮತ್ತು ಮೂಲಭೂತ ಮಾನವ ಹಕ್ಕುಗಳ ಕುರಿತು ಹಲವಾರು ಸಮಸ್ಯೆಗಳನ್ನು ಎತ್ತಿದರು. ಈ ಚರ್ಚೆ ಆಗಸ್ಟ್ 9 ರಂದು ಮುಂದುವರಿಯಲಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com