"ಸಂಸತ್ ಕಲಾಪ ಬಿಕ್ಕಟ್ಟು ಅಂತ್ಯಕ್ಕೆ ಪ್ರಧಾನಿ ಮಧ್ಯಪ್ರವೇಶಿಸಲಿ": ಮುಂಗಾರು ಅಧಿವೇಶನ ವಿಸ್ತರಣೆಗೆ ಆರ್ ಜೆಡಿ ಸಂಸದ ಆಗ್ರಹ 

ಪೆಗಾಸಸ್ ವಿಷಯವಾಗಿ ಸಂಸತ್ ಕಲಾಪ ವ್ಯರ್ಥವಾಗುತ್ತಿದ್ದು, ಬಿಕ್ಕಟ್ಟು ನಿವಾರಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂದು ಆರ್ ಜೆಡಿಯ ಸಂಸದ ಮನೋಜ್ ಕುಮಾರ್ ಝಾ ಆಗ್ರಹಿಸಿದ್ದಾರೆ. 
ರಾಜ್ಯಸಭೆ ಕಲಾಪ (ಸಂಗ್ರಹ ಚಿತ್ರ)
ರಾಜ್ಯಸಭೆ ಕಲಾಪ (ಸಂಗ್ರಹ ಚಿತ್ರ)
Updated on

ನವದೆಹಲಿ: ಪೆಗಾಸಸ್ ವಿಷಯವಾಗಿ ಸಂಸತ್ ಕಲಾಪ ವ್ಯರ್ಥವಾಗುತ್ತಿದ್ದು, ಬಿಕ್ಕಟ್ಟು ನಿವಾರಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂದು ಆರ್ ಜೆಡಿಯ ಸಂಸದ ಮನೋಜ್ ಕುಮಾರ್ ಝಾ ಆಗ್ರಹಿಸಿದ್ದಾರೆ. 

ವ್ಯರ್ಥ, ಪೋಲಾಗಿರುವ ಸಮಯಕ್ಕೆ ಪರಿಹಾರವಾಗಿ ಸಂಸತ್ ಅಧಿವೇಶನವನ್ನು ವಿಸ್ತರಿಸಬೇಕೆಂದು ಆರ್ ಜೆಡಿ ಸಂಸದ ಮನೋಜ್ ಕುಮಾರ್ ಝಾ ಒತ್ತಾಯಿಸಿದ್ದಾರೆ. 

ವಿಪಕ್ಷಗಳ ನಾಯಕರ ಪೈಕಿ ರಾಜ್ಯಸಭೆಯಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿರುವ ಮನೋಜ್ ಕುಮಾರ್ ಝಾ, "ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಿಸಲಾಗುತ್ತಿದೆ" ಎಂಬ ಸರ್ಕಾರದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

"ವಿಶ್ವಾಸಕ್ಕೆ ತೆಗೆದುಕೊಳ್ಳುವ ಸೋಗಿನಲ್ಲಿ ಸರ್ಕಾರ ಮಾತುಕತೆಯ ಬಾಗಿಲನ್ನು ಬಂದ್ ಮಾಡುತ್ತಿದೆ" ಎಂದು ಮನೋಜ್ ಕುಮಾರ್ ಝಾ ಆರೋಪಿಸಿದ್ದಾರೆ.

"ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ತಲುಪುವ ಕಲ್ಪನೆಯನ್ನು ಜನರಲ್ಲಿ ಮೂಡಿಸುತ್ತಿರುವವರಿಗೆ ವಿಪಕ್ಷಗಳಿಗೆ ಸ್ಪಷ್ಟವಾಗಿ ತಿಳಿಸುವುದಕ್ಕೆ ಆದೇಶ ಸಿಗದೇ ಇರಬಹುದು" ಎಂದು ಪಿಟಿಐ ಸಂದರ್ಶನದಲ್ಲಿ ಮೋದಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಜು.19 ರಿಂದ ಪ್ರಾರಂಭವಾದ ಸಂಸತ್ ಮುಂಗಾರು ಅಧಿವೇಶನದಲ್ಲಿ ಪೆಗಾಸಿಸ್ ಗೂಢಚರ್ಯೆ ಹಗರಣ, ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ ಸೇರಿದಂತೆ ಹಲವು ವಿಷಯಗಳಲ್ಲಿ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವುದರ ಪರಿಣಾಮ ಸಂಸತ್ ಅಧಿವೇಶನದ ಬಹುಪಾಲು ಕಲಾಪ ವ್ಯರ್ಥವಾಗುತ್ತಿದೆ. ಪೆಗಾಸಸ್ ಗೆ ಸಂಬಂಧಿಸಿದಂತೆ ಸರ್ಕಾರ ಪ್ರತಿಪಕ್ಷಗಳ ಆರೋಪಗಳನ್ನು ನಿರಾಕರಿಸುತ್ತಿದೆ.
 
ಈ ಬಗ್ಗೆ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಮನೋಜ್ ಝಾ,  ಸರ್ಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದೆ ಎಂದು ಮಾಧ್ಯಮಗಳಲ್ಲಿ ಹೇಳುತ್ತಿದೆ. ಆದರೆ ಅದರ ಪ್ರಯತ್ನಗಳ ಅರ್ಥ ಪ್ರತಿಪಕ್ಷಗಳ ಬೇಡಿಕೆಗಳಿಗೆ ಸ್ಪಂದಿಸುವುದೇ ಹೊರತು ಕೇವಲ ಆಲಿಸುವುದಲ್ಲ" ಎಂದು ಹೇಳಿದ್ದಾರೆ. 

ಸರ್ಕಾರ ವೈರತ್ವದ ಭಾಷೆಯನ್ನು ಬಳಕೆ ಮಾಡುತ್ತಿದ್ದು ಬಿಕ್ಕಟ್ಟು ಶಮನದ ಸಾಧ್ಯತೆಗಳೆ ಇಲ್ಲದಂತಾಗಿಸಿದೆ ಎಂದು ಝಾ ಆರೋಪಿಸಿದ್ದಾರೆ. 

ಆದರೆ ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ಅವರ ಮಂದಿಗೆ ಬಿಕ್ಕಟ್ಟು ಪರಿಹರಿಸಲು ಸೂಚಿಸಿ, ಎಲ್ಲವನ್ನೂ ಚರ್ಚಿಸಲು ಸಿದ್ಧರಿದ್ದೇವೆ ಎಂದು ಹೇಳಿದರೆ ಈಗಲೂ ಚರ್ಚೆಗೆ ಅವಕಾಶವಿದೆ. ಸಾಧ್ಯವಾದಲ್ಲಿ ಆ.15 ರ ನಂತರ ಸಂಸತ್ ಅಧಿವೇಶನವನ್ನು ವಿಸ್ತರಿಸುವ ಮೂಲಕ ವ್ಯರ್ಥವಾಗಿರುವ ಕಲಾಪದ ಸಮಯಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಝಾ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com