ಕರಾಟೆ ಬೆಲ್ಟ್ ನಲ್ಲಿ ತಾಯಿಯ ಕುತ್ತಿಗೆ ಹಿಸುಕಿ ಕೊಂದ ಬಾಲಕಿ!

15 ವರ್ಷದ ಬಾಲಕಿಯೋರ್ವಳು ಕರಾಟೆ ಬೆಲ್ಟ್ ಸಹಾಯದಿಂದ ಹೆತ್ತ ತಾಯಿಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಹೇಯ ಘಟನೆ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮುಂಬೈ: ಓದುವ ವಿಚಾರವಾಗಿ ತಾಯಿಯ ಒತ್ತಡ ತಾಳಲಾರದೆ ಬೇಸತ್ತ 15 ವರ್ಷದ ಬಾಲಕಿಯೋರ್ವಳು ಕರಾಟೆ ಬೆಲ್ಟ್ ಸಹಾಯದಿಂದ ಹೆತ್ತ ತಾಯಿಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಹೇಯ ಘಟನೆ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಜುಲೈ ೩೦ ರಂದೇ ನವಿ ಮುಂಬೈನ ಐರೋಲಿ ಪ್ರದೇಶದಲ್ಲಿ ಮಹಿಳೆಯೋರ್ವಳು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. ಆದರೆ ಆ ಸಂದರ್ಭದಲ್ಲಿ ಮಹಿಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸತ್ತಿದ್ದಾರೆ ಎಂದು ಆಕೆಯ ೧೫ ವರ್ಷದ ಮಗಳು ಹೇಳಿಕೆ ನೀಡಿದ್ದಳು. ಪೊಲೀಸರು ಕೂಡಾ ಅದನ್ನು ನಂಬಿದ್ದರು. 

ಮಗಳನ್ನು ಮೆಡಿಕಲ್ ಓದಿಸಬೇಕೆನ್ನುವ ಅದಮ್ಯ ಆಸೆಯನ್ನು ಇಟ್ಟುಕೊಂಡಿದ್ದ ತಾಯಿ ಮತ್ತು ಮಗಳ ನಡುವೆ ಅದೇ ವಿಷಯವಾಗಿ ಗಲಾಟೆ ನಡೆಯುತ್ತಿತ್ತು. ಬಾಲಕಿಗೆ ಮೆಡಿಕಲ್ ಕೋರ್ಸ್ ಓದಲು ಇಷ್ಟವಿರಲಿಲ್ಲ. ಮಹಿಳೆ ಸಾಯುವುದಕ್ಕೂ ಒಂದು ತಿಂಗಳ ಹಿಂದೆ, ಓದುವ ವಿಚಾರವಾಗಿ ತಾಯಿ ತನಗೆ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಳು. ಆ ಸಂದರ್ಭದಲ್ಲಿ ಪೊಲೀಸರು ಮನೆಯವರನ್ನು ಕರೆಸಿ ಸಮಾಲೋಚನೆ ನಡೆಸಿ ಕುಟುಂಬಸ್ಥರಿಗೆ ತಿಳಿ ಹೇಳಿದ್ದರು. ಆದರೆ ಪರಿಸ್ಥಿತಿ ಕೊಲೆಯ್ ಮಟ್ಟಕ್ಕೆ ಬರುತ್ತದೆ ಎಂದು ಅವರು ಎಣಿಸಿರಲಿಲ್ಲ.

ಶವದ ಮರಣೋತ್ತರ ಪರೀಕ್ಷೆಯ ವೇಳೆ ಮಹಿಳೆಯ ಸಾವು ಆಕಸ್ಮಿಕವಲ್ಲ, ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎನ್ನುವುದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ. ಬಾಲಕಿ ವಿರುದ್ಧ ಪೊಲೀಸರು ಸೆಕ್ಷನ್ ೩೦೨ರ ಅಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com