ಸಾಂದರ್ಭಿಕ ಚಿತ್ರ
ದೇಶ
ಪಶ್ಚಿಮ ಬಂಗಾಳ: ಟಿಎಂಸಿ ನಾಯಕನ ಗುಂಡಿಕ್ಕಿ ಹತ್ಯೆ, ಇದು ಬಿಜೆಪಿ ಕೊಲೆ ಎಂದ ಆಡಳಿತ ಪಕ್ಷ
ಉಪ ಚುನಾವಣೆ ಎದುರಿಸಲಿರುವ ಉತ್ತರ 24 ಪರಗಣದ ಖರ್ದಾದಲ್ಲಿ ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ ನಾಯಕನನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕೋಲ್ಕತ್ತಾ: ಉಪ ಚುನಾವಣೆ ಎದುರಿಸಲಿರುವ ಉತ್ತರ 24 ಪರಗಣದ ಖರ್ದಾದಲ್ಲಿ ತೃಣಮೂಲ ಕಾಂಗ್ರೆಸ್‌ನ ಯುವ ಘಟಕದ ನಾಯಕನನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಖರ್ದಾ ಟಿಎಂಸಿ ಶಾಸಕ ಕೋವಿಡ್‌ನಿಂದ ಸಾವನ್ನಪ್ಪಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.
ಖರ್ದಾದಿಂದ ಆಯ್ಕೆಯಾದ ಮತ್ತು ಕೋವಿಡ್‌ಗೆ ಬಲಿಯಾದ ಕಾಜಲ್ ಸಿನ್ಹಾ ಅವರ ಆಪ್ತ ರಣಜೋಯ್ ಶ್ರೀವಾಸ್ತವ(33) ಅವರು ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಬಿಟಿ ರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಡಳಿತ ಪಕ್ಷ ಟಿಎಂಸಿ ಈ ಹತ್ಯೆಗೆ ಬಿಜೆಪಿಯೇ ಹೊಣೆ ಎಂದಿದೆ. ಆದರೆ ಕೇಸರಿ ಪಕ್ಷ, ಈ ಘಟನೆಯಿಂದ ಟಿಎಂಸಿಯ ಒಳ-ಜಗಳ ಹೊರಬಿದ್ದಿದೆ ಎಂದು ಆರೋಪಿಸಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದು, ಕೊಲೆಯ ಉದ್ದೇಶ ಇನ್ನೂ ಪತ್ತೆಹಚ್ಚಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ