ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಫ್ಘಾನ್ ವಾಯು ಪ್ರದೇಶ ಬಳಕೆ ನಿಲ್ಲಿಸಿದ ದೆಹಲಿ-ಲಂಡನ್ ವಿಮಾನಗಳು

ಕಾಬೂಲ್ ಭಾನುವಾರ ತಾಲಿಬಾನ್ ಕೈವಶವಾಗಿದ್ದು, ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಲಂಡನ್‌ಗೆ ತೆರಳುವ ವಿಸ್ತಾರ ವಿಮಾನಗಳು ಅಫ್ಘಾನ್ ವಾಯು ಪ್ರದೇಶ ಬಳಸುವುದನ್ನು ನಿಲ್ಲಿಸಿವೆ.

ನವದೆಹಲಿ: ಕಾಬೂಲ್ ಭಾನುವಾರ ತಾಲಿಬಾನ್ ಕೈವಶವಾಗಿದ್ದು, ಅಫ್ಘಾನಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದೆಹಲಿಯಿಂದ ಲಂಡನ್‌ಗೆ ತೆರಳುವ ವಿಸ್ತಾರ ವಿಮಾನಗಳು ಅಫ್ಘಾನ್ ವಾಯು ಪ್ರದೇಶ ಬಳಸುವುದನ್ನು ನಿಲ್ಲಿಸಿವೆ.

ಕಾಬೂಲ್ ವಿಮಾನ ನಿಲ್ದಾಣವು ಅಫ್ಘಾನಿಸ್ತಾನ ವಾಯು ಮಾರ್ಗ "ಅನಿಯಂತ್ರಿತ" ಎಂದು ಸೋಮವಾರ ಘೋಷಿಸಿದೆ. ಹೀಗಾಗಿ ಅಪ್ಘಾನಿಸ್ತಾನ ವಾಯು ಪ್ರದೇಶ ತಪ್ಪಿಸುವಂತೆ ದೆಹಲಿ- ಲಂಡನ್ ವಿಮಾನಗಳಿಗೆ ಸೂಚಿಸಲಾಗಿದೆ.

"ನಾವು ಅಫ್ಘಾನಿಸ್ತಾನ ವಾಯುಪ್ರದೇಶವನ್ನು ಬಳಸುವುದನ್ನು ನಿಲ್ಲಿಸಿದ್ದೇವೆ ಮತ್ತು ಲಂಡನ್ ಹೀಥ್ರೂಗೆ ಮತ್ತು ನಮ್ಮ ವಿಮಾನಗಳಿಗೆ ಪರ್ಯಾಯ ಮಾರ್ಗವನ್ನು ಬಳಸಿಕೊಳ್ಳುತ್ತಿದ್ದೇವೆ" ಎಂದು ವಿಸ್ತಾರ ವಕ್ತಾರರು ತಿಳಿಸಿದ್ದಾರೆ.

"ನಾವು ಸಂಬಂಧಿತ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಮ್ಮ ಪ್ರಯಾಣಿಕರು, ಸಿಬ್ಬಂದಿ ಹಾಗೂ ವಿಮಾನಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ವಕ್ತಾರರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com