ಮೈನ್ಪುರಿ, ಆಲೀಘರ್ ಹೆಸರನ್ನು ಬದಲಿಸಲು ಯೋಗಿ ಆದಿತ್ಯನಾಥ್ ಸರ್ಕಾರ ಮುಂದು!

ಉತ್ತರ ಪ್ರದೇಶಗಳ ನಗರಗಳಿಗೆ ಮೊಘಲರು-ಮಧ್ಯಕಾಲೀನ ಅವಧಿಯಲ್ಲಿ ನಾಮಕರಣಗೊಂಡಿದ್ದ ಹೆಸರುಗಳನ್ನು ಬದಲಾವಣೆ ಮಾಡುವ ಕೆಲಸವನ್ನು ಆದಿತ್ಯನಾಥ್ ಸರ್ಕಾರ ಮುಂದುವರೆಸಿದ್ದು, ಈಗ ಆಲೀಘರ್ ಹೆಸರನ್ನು ಬದಲಾವಣೆ ಮಾಡುವ ನಿರ್ಣಯ ಕೈಗೊಂಡಿದೆ. 
ಆಲೀಘರ್
ಆಲೀಘರ್
Updated on

ಲಖನೌ: ಉತ್ತರ ಪ್ರದೇಶಗಳ ನಗರಗಳಿಗೆ ಮೊಘಲರು-ಮಧ್ಯಕಾಲೀನ ಅವಧಿಯಲ್ಲಿ ನಾಮಕರಣಗೊಂಡಿದ್ದ ಹೆಸರುಗಳನ್ನು ಬದಲಾವಣೆ ಮಾಡುವ ಕೆಲಸವನ್ನು ಯೋಗಿ ಆದಿತ್ಯನಾಥ್ ಸರ್ಕಾರ ಮುಂದುವರೆಸಿದ್ದು, ಈಗ ಆಲೀಘರ್ ಹೆಸರನ್ನು ಬದಲಾವಣೆ ಮಾಡುವ ನಿರ್ಣಯ ಕೈಗೊಂಡಿದೆ. 

ಇತ್ತೀಚೆಗಷ್ಟೇ ಫಿರೋಜಾಬಾದ್ ಗೆ ಮರುನಾಮಕರಣದ ಪ್ರಸ್ತಾವನೆ ಬಂದಿದ್ದ ಬೆನ್ನಲ್ಲೇ ಆಲೀಘರ್ ನ ಜಿಲ್ಲಾ ಪಂಚಾಯತ್ ಈ ಪ್ರದೇಶಕ್ಕೆ ಹರಿಘರ್ ಅಥವಾ ಹರಿಗಢ ಎಂಬ ಹೆಸರನ್ನು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಹೊಂದಿದೆ. 

ಇದು ದೀರ್ಘಕಾಲದಿಂದ ಬಾಕಿ ಇದ್ದ ಬೇಡಿಕೆ ಎಂದು ನಿರ್ಣಯ ಮಂಡಿಸಿರುವ ಸದಸ್ಯರು ಹೇಳಿದ್ದಾರೆ. 

ಪಂಚಾಯತ್ ನ ಮೊದಲ ಸಭೆಯಲ್ಲಿ 72 ಸದಸ್ಯರ ಪೈಕಿ 50 ಮಂದಿಯ ಹಾಜರಾತಿಯಲ್ಲಿ ಅವಿರೋಧವಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವಿಜಯ್ ಸಿಂಗ್ ಹೇಳಿದ್ದು ಈಗ ರಾಜ್ಯ ಸರ್ಕಾರದ ಅನುಮೋದನೆಗೆ ಕಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 

ಇದಕ್ಕೂ ಮುನ್ನ ಬಿಜೆಪಿ ನಾಯಕರು ಆಲೀಘರ್ ಗೆ ಬಿಜೆಪಿ ನಾಯಕ, ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಹೆಸರನ್ನು ಇಡಬೇಕೆಂದು ಮನವಿ ಮಾಡಿದ್ದರು. ಕಲ್ಯಾಣ್ ಸಿಂಗ್ ಆಲೀಘರ್ ನ ನಿವಾಸಿಯಾಗಿದ್ದರು. 

ಇನ್ನು ಮೈನ್ಪುರಿಯ ಜಿಲ್ಲಾ ಪಂಚಾಯತ್ ಸಹ ಅಲ್ಲಿನ ಹೆಸರನ್ನು ಈ ನಗರವನ್ನು ಸ್ಥಾಪಿಸಿದ ಋಷಿ ಮಾಯನ್ ನೆನಪಿಗಾಗಿ "ಮಾಯನ್ ನಗರ ಎಂಬ ಹೆಸರಿಗೆ ಬದಲಾವಣೆ ಮಾಡಬೇಕೆಂಬ ನಿರ್ಣಯ ಕೈಗೊಂಡಿದೆ. "ಪಂಚಾಯತ್ 23 ಮಂದಿ ಈ ನಿರ್ಣಯದ ಪರವಾಗಿ ಮತ ಹಾಕಿದ್ದರೆ ಇಬ್ಬರು ವಿರೋಧಿಸಿದ್ದಾರೆ" ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಾದ ಎಂದು ಅರ್ಚನ ಭದೋರಿಯಾ ಹೇಳಿದ್ದಾರೆ. ಮೈನ್ಪುರಿ ಎಸ್ ಪಿಯ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಭದ್ರಕೋಟೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com