ಭೋಪಾಲ್: ಮಧ್ಯ ಪ್ರದೇಶದ ಉಜ್ಜೈನಿಯ ಗೀತಾ ಕಾಲೋನಿಯಲ್ಲಿ ಗುರುವಾರ ರಾತ್ರಿ ನಡೆದ ಮೊಹರಂ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಲಾಯಿತು ಎಂಬ ಆರೋಪ ಕೇಳಿಬಂದಿದೆ.
'ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಕೂಗಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ
ಹಿಂದೂ ಧಾರ್ಮಿಕ ಮುಖಂಡರು ಒತ್ತಾಯಿಸಿದ ಹಿನ್ನೆಲೆಯಲ್ಲಿ, ಉಜ್ಜೈನಿಯಲ್ಲಿರುವ ಜೀವಾಜಿ ಗಂಜ್ ಪೊಲೀಸರು ವಿಡಿಯೋದಲ್ಲಿ ಘೋಷಣೆಗಳನ್ನು ಕೂಗುತ್ತಿರುವ ಕನಿಷ್ಠ 10 ಯುವಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
"ಇಲ್ಲಿಯವರೆಗೆ 10 ಜನರ ವಿರುದ್ಧ(20 ರಿಂದ 25 ವರ್ಷದೊಳಗಿನ) 124 ಎ (ದೇಶದ್ರೋಹ) ಮತ್ತು 153 ಬಿ ಅಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆರು ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ಹೆಚ್ಚುವರಿ ಎಸ್ಪಿ(ಎಎಸ್ಪಿ-ಉಜ್ಜಯಿನಿ) ಅಮರೇಂದ್ರ ಸಿಂಗ್ ಅವರು ಶುಕ್ರವಾರ ತಿಳಿಸಿದ್ದಾರೆ.
ಪೋಲಿಸರು ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಂಡಿರುವುದನ್ನು ಸ್ವಾಗತಿಸಿದ ಹಿಂದೂ ದಾರ್ಶನಿಕ ಮತ್ತು ಅವಾಹನ್ ಅಕ್ಷರದ ಮಹಾಮಂಡಳೇಶ್ವರ, ಆಚಾರ್ಯ ಶೇಖರ್(ಅತುಲೇಶಾನಂದ ಸರಸ್ವತಿ) ಅವರು, ಅಂತಹ ಸಮಾಜವಿರೋಧಿ ಮತ್ತು ದೇಶವಿರೋಧಿ ಶಕ್ತಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
Advertisement