ತಾಲಿಬಾನ್ ಸರ್ವೋಚ್ಛ ನಾಯಕ ಹೈಬತುಲ್ಲಾ ಪಾಕಿಸ್ತಾನ ಸೇನೆಯ ವಶದಲ್ಲಿ? ವಿದೇಶಿ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ

ಆಡಳಿತಾರೂಢ ಅಫ್ಘಾನಿಸ್ತಾನ ಒಕ್ಕೂಟದ ಮುಖ್ಯಸ್ಥನಾಗಲಿರುವ ತಾಲಿಬಾನ್ ನ ಸರ್ವೋಚ್ಛ ನಾಯಕ ಹೈಬತುಲ್ಲಾ ಅಖುಂಡಜಾದ ಪಾಕಿಸ್ತಾನ ಸೇನೆಯ ಕಸ್ಪಡಿಯಲ್ಲಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ತಾಲಿಬಾನ್ ಸರ್ವೋಚ್ಛ ನಾಯಕ
ತಾಲಿಬಾನ್ ಸರ್ವೋಚ್ಛ ನಾಯಕ

ನವದೆಹಲಿ: ಆಡಳಿತಾರೂಢ ಅಫ್ಘಾನಿಸ್ತಾನ ಒಕ್ಕೂಟದ ಮುಖ್ಯಸ್ಥನಾಗಲಿರುವ ತಾಲಿಬಾನ್ ನ ಸರ್ವೋಚ್ಛ ನಾಯಕ ಹೈಬತುಲ್ಲಾ ಅಖುಂಡಜಾದ ಪಾಕಿಸ್ತಾನ ಸೇನೆಯ ಕಸ್ಪಡಿಯಲ್ಲಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. 

60 ವರ್ಷದ ಈ ತಾಲಿಬಾನ್ ಮುಖಂಡ ಎಲ್ಲಿದ್ದಾನೆ ಎಂಬ ಬಗ್ಗೆ ಹುಡುಕಾಟ ನಡೆಯುತ್ತಿರುವ ಸಂದರ್ಭದಲ್ಲಿ ಆತ ಪಾಕಿಸ್ತಾನ ಸೇನೆಯ ವಶದಲ್ಲಿದ್ದಾನೆ ಎಂದು ಭಾರತೀಯ ಏಜೆನ್ಸಿಗಳಿಗೆ ವಿದೇಶ ಗುಪ್ತಚರ ಇಲಾಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಲಿಬಾನ್ ಸಂಘಟನೆಯ ರಾಜಕೀಯ, ಧಾರ್ಮಿಕ ಮತ್ತು ಮಿಲಿಟರಿ ವ್ಯವಹಾರಗಳ ಮೇಲೆ ಅಂತಿಮ ಅಧಿಕಾರವನ್ನು ಹೊಂದಿರುವ ಅಖುಂಡಜಾದ ಕಳೆದ ಆರು ತಿಂಗಳಲ್ಲಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಖುಂಡಜಾದ ಕೊನೆಯ ಬಾರಿಗೆ ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿಕೆ ಮೇ ತಿಂಗಳಲ್ಲಿ ರಂಜಾನ್ ಮಾಸದ ಕೊನೆಯ ದಿನ ಈದ್ ಉಲ್ ಫಿತರ್ ಸಂದರ್ಭದಲ್ಲಿ.

ಪಾಕ್ ಸೇನೆಯ ವಶದಲ್ಲಿರುವ ತಾಲಿಬಾನ್‌ನ ಅತ್ಯಂತ ಹಿರಿಯ ನಾಯಕ ಭಾರತ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು ಏಕೆಂದರೆ ಭಾರತವನ್ನು ಗುರಿಯಾಗಿಸಲು ಪಾಕಿಸ್ತಾನ ಸೇನೆಯನ್ನು ನಿರ್ದೇಶಿಸಬಹುದು ಎಂದು ಹೇಳಲಾಗುತ್ತಿದೆ. 2016 ರಲ್ಲಿ ಅಫ್ಘಾನ್-ಪಾಕಿಸ್ತಾನದ ಗಡಿ ಬಳಿ ಯುಎಸ್ ಡ್ರೋನ್ ದಾಳಿಯಲ್ಲಿ ಅವರ ಹಿಂದಿನ ಅಖ್ತರ್ ಮನ್ಸೂರ್ ಕೊಲ್ಲಲ್ಪಟ್ಟಾಗ ನಂಬಿಕಸ್ತ ನಾಯಕ ಎಂದು ಕರೆಯಲ್ಪಡುವ ಅಖುಂಡಜಾದ ತಾಲಿಬಾನ್ ನ ಆಡಳಿತವನ್ನು ವಹಿಸಿಕೊಂಡರು. ಈತ ನೈರುತ್ಯ ಪಾಕಿಸ್ತಾನದ ಒಂದು ಪಟ್ಟಣವಾದ ಕುಚ್‌ಲಾಕ್‌ನಲ್ಲಿರುವ ಮಸೀದಿಯಲ್ಲಿ ಹೇಳಿಕೊಡುತ್ತಿದ್ದಾನೆ ಎಂದು ಮಾಹಿತಿ ಸಿಕ್ಕಿದೆ.

ಈ ಮಧ್ಯೆ, ಅಮೆರಿಕ ನೇತೃತ್ವದ ಪಡೆಗಳು ಮತ್ತು ಹಿಂದಿನ ಸರ್ಕಾರದೊಂದಿಗೆ ಕೆಲಸ ಮಾಡಿದ ಜನರ ಉದ್ದೇಶಿತ ಹತ್ಯೆಗಳ ವರದಿಯೊಂದಿಗೆ ತಾಲಿಬಾನ್‌ನ ಮುಖವಾಡ ನಿನ್ನೆ ಮತ್ತಷ್ಟು ಹೊರಬಿದ್ದಿದೆ. ಈ ತಿಂಗಳು ಮುಗಿಯುವವರೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಯಾವುದೇ ನಿರ್ಧಾರ ಘೋಷಿಸುವ ಸಾಧ್ಯತೆಯಿಲ್ಲ.

18 ಸಾವಿರ ಮಂದಿ ಸ್ಥಳಾಂತರ, ನ್ಯಾಟೋ: ನ್ಯಾಟೋ ಪ್ರಕಾರ, ಉಗ್ರರು ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಕಾಬುಲ್ ನಿಂದ 18 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ನಿನ್ನೆ ಶುಕ್ರವಾರದ ಪ್ರಾರ್ಥನೆಗಳು ಮಸೀದಿಯಲ್ಲಿ ಶಾಂತವಾಗಿದ್ದವು. ಕಾಬೂಲ್‌ನಲ್ಲಿ ಶುಕ್ರವಾರದ ಪ್ರಾರ್ಥನೆಗಳು ಶಾಂತಿಯುತವಾಗಿತ್ತು, ಮಸೀದಿಗಳಲ್ಲಿ ಯಾವುದೇ ತಾಲಿಬಾನ್ ಪುರುಷರು ಕಾಣಲಿಲ್ಲ. ಇದುವರೆಗೆ ಅನೇಕ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಿದ್ದಾರೆ. 

ಜರ್ಮನಿಯ ಸುದ್ದಿ ಸಂಸ್ಥೆ ಡಾಯ್ಚ ವೆಲ್ಲೆ ಅವರು ತಾಲಿಬಾನ್ ತಮ್ಮ ಪತ್ರಕರ್ತರನ್ನು ಗುರಿಯಾಗಿಸಿ ವರದಿಗಾರನ ಸಂಬಂಧಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com