ಬಂದೂಕುಗಳ ನೆರಳಿನಲ್ಲಿ ಕೂರಿಸಿದ್ದರು: ಉಗ್ರರ ನಡುವೆ ಕಳೆದ ಆ ಕರಾಳ ಕ್ಷಣಗಳನ್ನು ಬಿಚ್ಚಿಟ್ಟ ಗೋರಖ್ ಪುರ ನಿವಾಸಿ 

ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ವಶದಲ್ಲಿದ್ದು ಸುರಕ್ಷಿತವಾಗಿ  ಭಾರತೀಯರ ಪೈಕಿ ಗೋರಖ್ ಪುರದ ಚೌರಿ ಚೌರಾದ ಶೈಲೇಂದ್ರ ಶುಕ್ಲಾ ಕೂಡ ಒಬ್ಬರು.
ಕಾಬೂಲ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಯಾಟಲೈಟ್ ನೋಟ
ಕಾಬೂಲ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಯಾಟಲೈಟ್ ನೋಟ

ಗೋರಖ್ ಪುರ: ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ವಶದಲ್ಲಿದ್ದು ಸುರಕ್ಷಿತವಾಗಿ  ಭಾರತೀಯರ ಪೈಕಿ ಗೋರಖ್ ಪುರದ ಚೌರಿ ಚೌರಾದ ಶೈಲೇಂದ್ರ ಶುಕ್ಲಾ ಕೂಡ ಒಬ್ಬರು. 

ಸೋಮವಾರ ಅಫ್ಘಾನಿಸ್ತಾನದಿಂದ ಗೋರಖ್ ಪುರಕ್ಕೆ ಶೈಲೇಂದ್ರ ಶುಕ್ಲಾ ತಲುಪಿದ್ದು, ಕಾಬೂಲ್ ನಲ್ಲಿ ಅವರು ನಾಲ್ಕು ಗಂಟೆಗಳ ಕಾಲ ಉಗ್ರರ ನಡುವೆ ಇದ್ದ ಕರಾಳ ಕ್ಷಣಗಳನ್ನು ಬಿಚ್ಚಿಟ್ಟಿದ್ದಾರೆ.

ಅಫ್ಘಾನಿಸ್ತಾನದಿಂದ ಭಾರತಕ್ಕೆ ಹೊರಡಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಭಾರತೀಯರನ್ನು ಮಾರ್ಗಮಧ್ಯದಲ್ಲೇ ತಡೆದಿದ್ದ ತಾಲೀಬಾನ್ ಉಗ್ರರು ಅವರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು.

ಅಫ್ಘಾನಿಸ್ತಾನದಲ್ಲಿದ್ದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಹಾಗೂ ಮಾಧ್ಯಮ ಸಿಬ್ಬಂದಿಗಳ ಮಧ್ಯಪ್ರವೇಶದ ಪರಿಣಾಮವಾಗಿ ಉಗ್ರರ ಕಪಿಮುಷ್ಠಿಯಿಂದ ಭಾರತೀಯರು ಪಾರಾಗಿದ್ದರು.

ಕಾಬೂಲ್ ನಲ್ಲಿ ಯಂತ್ರಗಳ ದುರಸ್ತಿ ಕಾರ್ಯಕ್ಕಾಗಿ ಎರಡು ತಿಂಗಳ ಕಾಲ ಅಲ್ಲಿಯೇ ಕೆಲಸ ಮಾಡಲು ಶೈಲೇಂದ್ರ ಶುಕ್ಲಾ ಜು.16 ರಂದು ಕಾಬೂಲ್ ಗೆ ಭೇಟಿ ನೀಡಿದ್ದರು. ಈ ಮಧ್ಯದಲ್ಲಿ ತಾಲೀಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರಿಂದ ಶೈಲೇಂದ್ರ ಅವರು ತಮ್ಮ ಯೋಜನೆಯನ್ನು ಮೊಟಕುಗೊಳಿಸಿ ವಾಪಸ್ಸಾಗಬೇಕಿತ್ತು.

"ಅಫ್ಘಾನಿಸ್ತಾನ ಉಗ್ರರ ಕೈವಶವಾಗುತ್ತಿದ್ದಂತೆಯೇ ಭದ್ರತಾ ದೃಷ್ಟಿಯಿಂದ ಕೈಗಾರಿಕೆಯ ಮಾಲಿಕರು ಕೈಗಾರಿಕೆಯ ಸುತ್ತ ಮುತ್ತಲ ಪ್ರದೇಶಕ್ಕಷ್ಟೇ ನಮ್ಮನ್ನು ನಿರ್ಬಂಧಿಸಿದ್ದರು. ಆದರೆ ನಾವು ನಿರಂತರವಾಗಿ ಭಾರತೀಯ ರಾಯಭಾರಿ ಕಚೇರಿ ಹಾಗೂ ಮಾಧ್ಯಮಗಳೊಂದಿಗೆ ಸಂಪರ್ಕದಲ್ಲಿದ್ದೆವು" ಎಂದು ಶೈಲೇಂದ್ರ ಮಾಹಿತಿ ನೀಡಿದ್ದಾರೆ.

ಭಾರತೀಯ ಅಧಿಕಾರಿಗಳು ಅಂತಿಮವಾಗಿ ಶುಕ್ರವಾರದಂದು ರಾತ್ರಿ ನಮ್ಮನ್ನು ಕಾಬೂಲ್ ನ ಖಲೀಜ್ ಹಾಲ್ ಗೆ ಕರೆದೊಯ್ದರು. ಮರುದಿನ ಬೆಳಿಗ್ಗೆ ಕಾಬೂಲ್ ವಿಮಾನ ನಿಲ್ದಾಣಕ್ಕೆ 6  ಬಸ್ ಗಳಲ್ಲಿ ತೆರಳಿದೆವು ಎಂದು ಶೈಲೇಂದ್ರ ಹೇಳಿದ್ದಾರೆ.

ಆದರೆ ನಾವು ವಿಮಾನ ನಿಲ್ದಾಣಕ್ಕೆ ಹೊರಡುತ್ತಿದ್ದಂತೆಯೇ ಮಾರ್ಗ ಮಧ್ಯದಲ್ಲಿ ನಮ್ಮನ್ನು ತಾಲೀಬಾನಿಗಳು ನಿಲ್ಲಿಸಿ ತಮ್ಮೊಂದಿಗೆ ಬರುವಂತೆ ಹೇಳಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ತಮ್ಮ ಬಂದೂಕುಗಳ ನೆರಳಲ್ಲಿ ಕೂರಿಸಿದ್ದರು ಎಂದು ಆ ಕರಾಳ ಕ್ಷಣಗಳನ್ನು ಶೈಲೇಂದ್ರ ನೆನಪಿಸಿಕೊಂಡಿದ್ದಾರೆ.

ಕಾಬೂಲ್ ನ ರಾಯಭಾರಿ ಅಧಿಕಾರಿಗಳು ಹಾಗೂ ಮಾಧ್ಯಮಗಳು ನಮ್ಮ ಪರಿಸ್ಥಿತಿಯನ್ನು ತಿಳಿದುಕೊಂಡು ನಮ್ಮನ್ನು ಕೆಲವೇ ಗಂಟೆಗಳಲ್ಲಿ ಬಂದು ಸೇರಿದರು. ಈ ಬಳಿಕ ನಮ್ಮನ್ನು ಹಿಡಿದಿಟ್ಟಿದ್ದ ತಾಲೀಬಾನಿ ಉಗ್ರರೂ ನಮ್ಮೊಂದಿಗೆ ಸ್ನೇಹಯುತವಾಗಿ ನಡೆದುಕೊಂಡರು ಹಾಗೂ ಟೀ, ಊಟ ನೀಡಿದರು. ನಂತರ ನಾಲ್ಕು ಗಂಟೆಗಳ ಬಂಧನದಿಂದ ಮುಕ್ತಿ ದೊರೆಯಿತು ಎಂದು ಶುಕ್ಲಾ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com