ಆಡಳಿತ ಸುಧಾರಣೆ ಚುರುಕುಗೊಳಿಸಲು ಮೋದಿ ಮುಂದು, ಪಕ್ಷದ 2019ರ ವಿಷನ್ ಡಾಕ್ಯುಮೆಂಟ್ ಅಧ್ಯಯನಕ್ಕೆ ಸಂಪುಟಕ್ಕೆ ಸೂಚನೆ

ಆಡಳಿತಾತ್ಮಕ ಸುಧಾರಣೆಗಳಿಗೆ ಚುರುಕು ಮುಟ್ಟಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ
Updated on

ನವದೆಹಲಿ: ಆಡಳಿತಾತ್ಮಕ ಸುಧಾರಣೆಗಳಿಗೆ ಚುರುಕು ಮುಟ್ಟಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದು 2019 ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಬಿಡುಗಡೆ ಮಾಡಿದ್ದ ವಿಷನ್ ಡಾಕ್ಯುಮೆಂಟ್ (ದೂರದೃಷ್ಟಿ ಯೋಜನೆಗಳ ನೀಲನಕ್ಷೆ) ಯ ಅಂಶಗಳನ್ನು ತ್ವರಿತವಾಗಿ ಜಾರಿಗೊಳಿಸಲು ಸಚಿವ ಸಂಪುಟ ಸಹೋದ್ಯೋಗಿಗಳಿಗೆ ನೀಡಿದ್ದಾರೆ.

2014, 2019 ರ ವಿಷನ್ ಡಾಕ್ಯುಮೆಂಟ್ ನ್ನು ಅಧ್ಯಯನ ಮಾಡವಂತೆ ಹೊಸ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದು ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಅವುಗಳನ್ನು ತ್ವರಿತವಾಗಿ ಜಾರಿಗೊಳಿಸುವಂತೆ ಮೋದಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಚಿವ ಸಂಪುಟ ಪುನಾರಚನೆಯಾದ ಬಳಿಕ ನಡೆದ 2 ಸಚಿವ ಸಂಪುಟ ಸಭೆಗಳಲ್ಲಿ ಪ್ರಧಾನಿ 2019 ರ ವಿಷನ್ ಡಾಕ್ಯುಮೆಂಟ್ ನ ಅಂಶಗಳನ್ನು ಜಾರಿಗೊಳಿಸುವತ್ತ ಗಮನ ಕೇಂದ್ರೀಕರಿಸಲು ಮೋದಿ ಹೇಳಿದ್ದಾರೆ.

ಪಕ್ಷದ ಆಂತರಿಕವಾಗಿ ಬಿಜೆಪಿ ನಾಯಕರು ಮೂರು ಪ್ರಮುಖ, ದೊಡ್ಡ ಕ್ಷೇತ್ರಗಳಾದ ಆಡಳಿತ, ಪೊಲೀಸ್, ನ್ಯಾಯಾಂಗ ಸುಧಾರಣೆಗಳತ್ತ ಗಮನ ಹರಿಸುತ್ತಿದ್ದಾರೆ.

2019 ರ ವಿಷನ್ ಡಾಕ್ಯುಮೆಂಟ್ ನಲ್ಲಿ ಕಡಿಮೆ ಸರ್ಕಾರ, ಗರಿಷ್ಠ ಆಡಳಿತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾಗರಿಕ ಸೇವೆಗಳಲ್ಲಿನ ಸುಧಾರಣೆ ಹಾಗೂ ಪೂರಕ ಇಲಾಖೆಗಳ ವಿಲೀನದ ಭರವಸೆ ನೀಡಿತ್ತು.

ರಾಜ್ಯಗಳೊಂದಿಗೆ ಸಮಾಲೋಚನೆ ಬಳಿಕ, ಮಾದರಿ ಪೊಲೀಸ್ ಕಾಯ್ದೆಯನ್ನು ಜಾರಿಗೊಳಿಸುವ ಬಗ್ಗೆಯೂ ವಿಷನ್ ಡಾಕ್ಯುಮೆಂಟ್ ಭರವಸೆ ನೀಡಿತ್ತು.

ಕೋವಿಡ್-19 ಎರಡನೇ ಅಲೆಯ ನಂತರ ಎದುರಾದ ರಾಜಕೀಯ ಸವಾಲುಗಳನ್ನು ಎದುರಿಸಲು ಪ್ರಧಾನಿ ಮೋದಿ ಆಡಳಿತಾತ್ಮಕ ಸುಧಾರಣೆಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆರ್ಟಿಕಲ್ 370 ರದ್ದತಿ, ಸಿಎಎ ಜಾರಿಗಳಂತಹ ರಾಷ್ಟ್ರೀಯವಾದಿ ವಿಚಾರಗಳಿಗೆ ಸಂಬಂಧಿಸಿದ ಭರವಸೆಗಳನ್ನು ಮೋದಿ ಸರ್ಕಾರ ಈಡೇರಿಸಿದ್ದರೂ, ದೇಶಾದ್ಯಂತ ಒಂದೇ ಬಾರಿ ಚುನಾವಣೆ ನಡೆಸುವುದು, ಚುನಾವಣೆಗಳ ಸಂದರ್ಭಗಳಲ್ಲಿ ದೇಶಾದ್ಯಂತ ಮತದಾರರ ಒಂದೇ ಪಟ್ಟಿ, 2023 ವೇಳೆಗೆ ರೈತರ ಆದಾಯವನ್ನು ಹೆಚ್ಚುಗೊಳಿಸುವುದು ಸೇರಿದಂತೆ ಇನ್ನೂ ಹಲವು ಭರವಸೆಗಳನ್ನು ಮೋದಿ ಸರ್ಕಾರ ಈಡೇರಿಸಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com